ಕೊಟ್ಟಮುಡಿ ಮರ್ಕಝ್ ಶಾಲೆಯ ಮಾಷಿತಾಳಿಗೆ ಗ್ಲೋಬೆಲ್ ವಿಷನೆರಿ ಅವಾರ್ಡ್

Dec 16, 2025 - 13:34
Dec 16, 2025 - 14:04
 0  807
ಕೊಟ್ಟಮುಡಿ ಮರ್ಕಝ್ ಶಾಲೆಯ ಮಾಷಿತಾಳಿಗೆ ಗ್ಲೋಬೆಲ್ ವಿಷನೆರಿ ಅವಾರ್ಡ್

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು:ಕೇರಳದ ತ್ರಿಶೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂ ಯು ಎನ್ ವತಿಯಿಂದ ಆಯೋಜಿಸಲಾದ ಮಾಡೆಲ್ ಯುನೈಟೆಡ್ ನೇಷನ್ಸ್ ಗ್ಲೋಬಲ್ ಡಿಬೇಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಪೋಕ್ಲು ಬಳಿಯ ಕೊಟ್ಟಮುಡಿಯ ಮರ್ಕಝ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಪಿ.ಎಂ.ಮಾಶಿತ ಗ್ಲೋಬಲ್ ವಿಷನರಿ ಅವಾರ್ಡ್ ಪಡೆದುಕೊಂಡಿದ್ದಾರೆ.

 ವಿವಿಧ ಶಾಲೆಗಳ ವಿದ್ಯಾರ್ಥಿಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿ ಮಾಶಿತ ಅವರು ದೇಶದ ಪ್ರತಿನಿಧಿಯಾಗಿ ಪಾಲ್ಗೊಂಡು, ಜಾಗತಿಕ ವಿಷಯಗಳ ಕುರಿತು ಸ್ಪಷ್ಟ,ಆತ್ಮವಿಶ್ವಾಸಪೂರ್ಣ ಹಾಗೂ ಪರಿಣಾಮಕಾರಿಯಾಗಿ ವಿಷಯ ಮಂಡನೆ ಮಾಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಟ್ಟಮುಡಿ ಮರ್ಕಝ್ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಮಾಶಿತ ಮೂರ್ನಾಡುವಿನ ಪಿ. ಎ.ಮುನೀರ್ ಫೈಝಿ ಹಾಗೂ ಬುಶ್ರಾ ದಂಪತಿಗಳ ಪುತ್ರಿಯಾಗಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 7
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0