ಗೋಜೋ ಕಾಯ್ ಕರಾಟೆ ತರಬೇತಿ ಶಾಲೆಗೆ ಸಮಗ್ರ ಚಾಂಪಿಯನ್ ಪಟ್ಟ
ವಿರಾಜಪೇಟೆ: ಸಮರ ಕಲೆಗಳಲ್ಲಿ ಒಂದಾದ ಕರಾಟೆ ಕ್ರೀಡೆಯಲ್ಲಿ ಭಾಗವಹಿಸಿದ ಗೋಜೊ ಕಾಯ್ ವಿರಾಜಪೇಟೆ ಕರಾಟೆ ತರಬೇತಿ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಶಿಪ್ ಪಟ್ಟ ಅಲಂಕರಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ವಿ.ಎನ್. ಯೋಧ ಮಾರ್ಷಲ್ ಆರ್ಟ್ಸ್ ಆಕಾಡೆಮಿ ಮೈಸೂರು ವತಿಯಿಂದ ಮೈಸೂರಿನ ಟೇರೆಷಿಯನ್ ಕಾಲೇಜು ಒಳಾಂಗಣ ಕ್ರೀಡಾಂಗಣ ದಲ್ಲಿ 5ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ನಡೆಯಿತು. ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿದ ಗೋಜೋ ಕಾಯ್ ವಿರಾಜಪೇಟೆ ಕರಾಟೆ ತರಬೇತಿ ಶಾಲೆಯ ವಿಧ್ಯಾರ್ಥಿಗಳು 22 ಚಿನ್ನದ ಪದಕಗಳು, 27 ಬೆಳ್ಳಿ ಪದಕಗಳು ಹಾಗೂ 26 ಕಂಚಿನ ಪದಕಗಳನ್ನು ಪಡೆದುಕೊಂಡರು.
ತರಬೇತಿ ಶಾಲೆಯ ಒಟ್ಟು 52 ವಿಧ್ಯಾರ್ಥಿಗಳು ಭಾಗವಹಿಸಿ ಪಂದ್ಯಾವಳಿಯಲ್ಲಿ ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡರು. ಕರಾಟೆ ಶಿಕ್ಷಕರಾದ ಸನ್ ಸಾಯಿ ಎಂ.ಬಿ. ಚಂದ್ರನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.