ರಾಷ್ಟ್ರೀಯ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ

Aug 6, 2026 - 11:52
 0  71
ರಾಷ್ಟ್ರೀಯ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ

ನಾಪೋಕ್ಲು: ಹರಿಯಾಣದ ರೌಟ್ ಆಫ್ ನಲ್ಲಿ ಈಚೆಗೆ ನಡೆದ 13ನೇ ಆವೃತಿಯ ವಿದ್ಯಾರ್ಥಿಗಳ ರಾಷ್ಟ್ರೀಯ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ  ನಾಪೋಕ್ಲು ಸಮೀಪದ ಯವಕಪಾಡಿಯ ಅಪ್ಪಾರಂಡ ತನಿಷ್ ಮುತ್ತಪ್ಪ ಹಾಗೂ ತನವ್ ಪೂವಣ್ಣ ಸಹೋದರರು ಸಾಧನೆ ಮಾಡಿ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ .

ಜುಲೈ 31 ರಿಂದ ಆಗಸ್ಟ್ ಎರಡರವರೆಗೆ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿಯ ಅಂಡರ್ 17 ಹಾಗೂ ಅಂಡರ್ 19 ವಿಭಾಗಗಳಲ್ಲಿ ಇಬ್ಬರು ಕ್ರೀಡಾಪಟುಗಳು ಮೂರು ಚಿನ್ನದ ಪದಕಗಳನ್ನು ಮುಡಿಗಿರಿಸಿಕೊಂಡಿದ್ದಾರೆ.

ಅಂಡರ್ 19 ಸಿಂಗಲ್ ವಿಭಾಗದಲ್ಲಿ ತನಿಷ್ ಮುತ್ತಪ್ಪ ಹರಿಯಾಣದ ಎದುರಾಳಿಯನ್ನು ಮಣಿಸಿ ಚಿನ್ನದ ಪದಕ ಗಳಿಸಿದರು.ಅಂಡರ್ 17 ವಿಭಾಗದಲ್ಲಿ ತನವ್ ಪಂಜಾಬ್ ನ ಎದುರಾಳಿಯನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡರು .ಅಂಡರ್ 19 ಡಬಲ್ಸ್ ನಲ್ಲಿ ತನಿಷ್ ತನವ್ ಸಹೋದರ ಜೋಡಿ, ರಾಜಸ್ಥಾನದಲ್ಲಿ ಅಂತಿಮ ಪಂದ್ಯದಲ್ಲಿ ಎದುರಾಳಿ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಟೂರ್ನಿಯಲ್ಲಿ 19 ರಾಜ್ಯಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು .ಇವರು ಮಡಿಕೇರಿ ತಾಲೂಕು ಯವಕಪಾಡಿಯ ಗ್ರಾಮದ ನಿವಾಸಿ ಅಪ್ಪಾರಂಡ ಸಾಗರ್ ಗಣಪತಿ ಮತ್ತೆ ಸುಮನ್ ದಂಪತಿಗಳ ಪುತ್ರರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0