ಗೋಣಿಕೊಪ್ಪ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ. ಮಂಡೇಪಂಡ ಆಶಿಕ್ ಚಂಗಪ್ಪ ಆಯ್ಕೆ

May 5, 2026 - 13:30
 0  389
ಗೋಣಿಕೊಪ್ಪ: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾಗಿ ಡಾ. ಮಂಡೇಪಂಡ ಆಶಿಕ್ ಚಂಗಪ್ಪ  ಆಯ್ಕೆ

ಗೋಣಿಕೊಪ್ಪ;ಇಲ್ಲಿನ ಕಾಕೂನ್ ಸಭಾಂಗಣದಲ್ಲಿ ನಡೆದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಗೋಣಿಕೊಪ್ಪ ಇದರ ವಾರ್ಷಿಕ ಸಭೆಯಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ವಾಸುದೇವನ್, ಅವರ ಉಪಸ್ಥಿತಿಯಲ್ಲಿ ಪಿಪಿಎಫ್ ಆಶಿಕ್ ಚಂಗಪ್ಪ ಅವರನ್ನು ಅಧ್ಯಕ್ಷರಾಗಿ ಘೋಷಿಸಲಾಯಿತು.

ಐಪಿಪಿ ಬಿ.ಎನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಶಿಕ್ ಚಂಗಪ್ಪ ಅಧಿಕಾರ ಸ್ವೀಕರಿಸಿದರು. ನೂತನ ಪದಾಧಿಕಾರಿಗಳಾಗಿ ಪಿಪಿಎಫ್ ಮೋಹನ್ ಮೆಕೇರಿರ, ಎಂ.ಎಸ್ ಸಚಿನ್ ಬೆಳ್ಯಪ್ಪ, ಸಹಕಾರ್ಯದರ್ಶಿ ನಾಗೇಂದ್ರ, ಉಪಾಧ್ಯಕ್ಷರಾಗಿ ಪಿಪಿಎಪ್ ನಾಗೇಶ್ ಮೋಹನ್, ಕುಶಲಾಪ್ಪ, ಚೇತನ್, ವಿ.ವಿ ಜೀತೆಂದ್ರ, ಅಟೋನಿ ಜೋಸೆಫ್, ಮಧುಮಾಚಯ್ಯ, ರವಿ, ಅಲ್ಲಮಾಡ ಸುನೀಲ್, ಶರತ್, ಅಟೋನಿ ಪಿ.ಜೆ ಅಯ್ಕೆಯಾಗಿದ್ದಾರೆ.

 ಕರ್ನಾಟಕ ರಾಜ್ಯ ಇಂಧನ ಇಲಾಖೆಯ ಮುಖ್ಯ ವಿದ್ಯುತ್ ನಿರೀಕ್ಷಕ ತಿತೀರ ರೋಷನ್ ಅಪ್ಪಚ್ಚು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಒಗ್ಗಟ್ಟಿನ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ವಿಶೇಷತೆಯ ಗುಣವಾಗಿದೆ. ಇದನ್ನು ಸೀನಿಯರ್ ಚೇಂಬರ್ ಸಮಾನ ಮನಸ್ಥಿತಿಯೊಂದಿಗೆ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ನಡೆ ಎಂದು ಹೇಳಿದರು.

 ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ವಾಸುದೇವನ್ ಮಾತನಾಡಿ, ಸಮಾಜಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜನರಡೆಗೆ ಕೊಂಡೊಯ್ಯುವ ವ್ಯವಸ್ಥೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂದಿದೆ. ಈ ಹಿನ್ನೆಲೆಯೊಳಗೆ ಜನರ ಅನುಕೂಲವನ್ನು ಒದಗಿಸಿಕೊಡುವ ಧ್ಯೇಯ ಉದ್ದೇಶದೊಂದಿಗೆ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರೀಯ ಉಪಾಧ್ಯಕ್ಷೆ, ಪಿ.ಪಿ.ಎಫ್ ಅಕ್ಷತಾ ಆರ್. ಮಾತನಾಡಿ, ಗೋಣಿಕೊಪ್ಪ ಘಟಕ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮತ್ತು ಅದರ ಮಾದರಿ ನಡೆಯ ಬಗ್ಗೆ ವಿವರಿಸಿದರು.

ಇದೇ ಸಂದರ್ಭ, ಕೊಡವ ಕುಟುಂಬಗಳಲ್ಲಿನ ಹಗ್ಗ ಜಗ್ಗಾಟ ಕ್ರೀಡಾ ಉತ್ಸವ ಆಯೋಜಿಸಿದ ಹಿನ್ನೆಲೆ ಭಾರತೀಯ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ ಪೊನ್ನಲತಂಡ ಕಿರಣ್ ಪೊನ್ನಪ್ಪ, ಲಯನ್ಸ್ ಸಂಸ್ಥೆಯ ಪ್ರಾದೇಶಿಕ ಅಧ್ಯಕ್ಷರಾಗಿ ಆಯ್ಕೆಯಾದ ಮನ್ನಕ್ಕಮನೆ ಬಾಲಕೃಷ್ಣ, ಜತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡ ವಿದ್ಯಾ ಎಂ.ಕೆ, ಸ್ವೆನ್ ಬೋಪಣ್ಣ, ಪಿಯುಸಿಯಲ್ಲಿ ಸಾಧನೆ ಮಾಡಿದ ಕುಶಾಲ್ ಕುಟ್ಟಪ್ಪ, ಕಳೆದ ವಾರ್ಷಿಕದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್‌ನಲ್ಲಿ ಅತ್ಯುತ್ತಮ ಸೇವೆ ನೀಡಿದ ನಾಗೇಶ್ ಮೋಹನ್, ಮೇಕೆರಿರ ಮೋಹನ್ ಇವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ವರದಿ ಬಿ ಎನ್ ಪ್ರಕಾಶ್ ನೆರವೇರಿಸಿದರು. ವಾಸುದೇವನ್ ಪರಿಚಯವನ್ನು ಸೌಮ್ಯ ನಾಗೇಶ್, ಅಕ್ಷತಾ ಪರಿಚಯವನ್ನು ಸೌಮ್ಯ ಬಾಲು, ಡಾ.ಅಪ್ಪಚ್ಚು ಪರಿಚಯವನ್ನು ಸಮಿ ಉತ್ತಪ್ಪ, ಅಶಿಕ್ ಚಂಗಪ್ಪ ಪರಿಚಯವನ್ನು ಮೀನಾಕ್ಷಿ ಮೋಹನ್ ನೆರವೇರಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರುಗಳು ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0