ಗೋಣಿಕೊಪ್ಪ: ಸ್ನೇಹಿತರ ಬಳಗ ಕೊಪ್ಪರವರ 2026 ದಸರಾ ಮಹೋತ್ಸವದ ಲೋಗೋ ಬಿಡುಗಡೆ

Aug 16, 2026 - 11:26
 0  45
ಗೋಣಿಕೊಪ್ಪ: ಸ್ನೇಹಿತರ  ಬಳಗ ಕೊಪ್ಪರವರ 2026 ದಸರಾ ಮಹೋತ್ಸವದ ಲೋಗೋ ಬಿಡುಗಡೆ

ಗೋಣಿಕೊಪ್ಪ:ಕಳೆದ 36 ವರ್ಷಗಳಿಂದ ಜನರ ಮೆಚ್ಚುಗೆ ಪಡೆಯುವುದರ ಜೊತೆಗೆ ಹಲವು ಬಹುಮಾನಗಳನ್ನು ಪಡೆದುಕೊಂಡು ಬಂದಿರುವ ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿ 15-08-2026ದಂದು ಗೋಣಿಕೊಪ್ಪಲು ಮಹಿಳಾ ಸಮಾಜದಲ್ಲಿ ನಡೆದ ಸಮಾರಂಭದಲ್ಲಿ ಸ್ನೇಹಿತರ ಬಳಗ ಕೊಪ್ಪ ಕಾರ್ಯಾಧ್ಯಕ್ಷರಾದ ಶ್ರೀ ಕಾಡ್ಯಮಾಡ ಚೇತನ್ ಹಾಗೂ ಸಂಘದ ಅಧ್ಯಕ್ಷರಾದ ಸುಧೀಶ್ ರೈ ಲೋಗೋ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಾಧ್ಯಕ್ಷ ಕಾಡ್ಯಮಾಡ ಚೇತನ್, ಎಲ್ಲರ ಸಹಕಾರದಿಂದ ಈ ವರ್ಷವೂ ಸಂಘವು ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೇಳಿದರು. ಬಿಡುಗಡೆ ಸಮಾರಂಭದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಕೆ.ಜಿ. ಪ್ರಸಾದ್, ಸುಹಾಸ್, ಮಣಿ, ಸುಧಾಕರ್ ರೈ, ಅನೀಶ್, ಶ್ರೀಧರ್ ರೈ, ಥೋಮಸ್, ಸುನಿಲ್ ರೈ, ನಿತೀಶ್ ಪಿ.ಆರ್, ಪುಷ್ಪರಾಜ್, ಎಸ್.ಬಿ. ಕೆ ಸದಸ್ಯರು ಹಾಗೂ ಕಾರ್ಯಕರ್ತರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0