ಗೋಣಿಕೊಪ್ಪ: ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಕಾರ್ಯಕ್ರಮ

Jul 30, 2026 - 18:58
 0  52
ಗೋಣಿಕೊಪ್ಪ: ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಕಾರ್ಯಕ್ರಮ

ಪೊನ್ನಂಪೇಟೆ, ಜು.30: ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರ, ಗೋಣಿಕೊಪ್ಪ ಹಾಗೂ ಅಕ್ಷಯ ಚಾರಿಟೇಬಲ್ ಟ್ರಸ್ಟ್ (ರಿ.), ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

 ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಎಸ್. ರಾಮಮೂರ್ತಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಬಿ.ಎಲ್. ಯಶೋದ ಅವರನ್ನು ಸನ್ಮಾನಿಸಿ, ಅವರ ಆಶೀರ್ವಾದ ಪಡೆಯಲಾಯಿತು. ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರದ ನಿರ್ದೇಶಕ ಸೋಮಯ್ಯ ಕೆ.ಕೆ. ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶರ್ಲಿ ಬೋಪಣ್ಣ ಯೋಗಾಭ್ಯಾಸದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಯೋಗ ಅರ್ಜುನ ಪ್ರಶಸ್ತಿ ಪುರಸ್ಕೃತೆ ಅಲಿಮಾ ಪಿ.ಎಚ್. ಅವರು ಗುರು ವಂದನೆ ಹಾಗೂ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಧ್ಯಾನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕುಮಾರ್ ಹಿಂದುಸ್ತಾನ್ ಇಂಡಸ್ಟ್ರೀಸ್ ನ ಕುಮಾರ್, ಲೆಕ್ಕಪರಿಶೋಧಕರಾದ ಸುಬ್ರಹ್ಮಣ್ಯ, ಅವಿನಾಶ್ ಕುಶಾಲಪ್ಪ, ಸಂಧ್ಯಾ, ಆರತಿ, ಗಾಯತ್ರಿ ಮಂಜುನಾಥ್, ಅಶ್ವಿನಿ, ನೇತ್ರ ಸೇರಿದಂತೆ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಮುನಾ ಸ್ವಾಗತಿಸಿದರು.

ಕುಮಾರಿ ಗಾಯನ, ಕುಮಾರಿ ಯಶಸ್ವಿನಿ ಹಾಗೂ ಪೃಥ್ವಿ ಪ್ರಾರ್ಥನೆ ಸಲ್ಲಿಸಿದರು. ಶೋಭಾ ಶಂಕರ್, ಅಮಿತಾ ಹಾಗೂ ಸಮಿತಾ ಅವರು ಅತಿಥಿಗಳನ್ನು ಸನ್ಮಾನಿಸಿದರು. ಸುಮಿತ್ರ ಕೆ.ಎಸ್. ವಂದನಾರ್ಪಣೆ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0