Kodagu

ಗೋಣಿಕೊಪ್ಪ: ಜೀತೋ-ಬಲೆನೋ ಕಾರು ಡಿಕ್ಕಿ: ಚಾಲಕನಿಗೆ ಗಾಯ

admincoorgdaily

ಗೋಣಿಕೊಪ್ಪ: ಜೀತೋ-ಬಲೆನೋ ಕಾರು ಡಿಕ್ಕಿ: ಚಾಲಕನಿಗೆ ಗಾಯ

ಗೋಣಿಕೊಪ್ಪ:ತಡರಾತ್ರಿ ಆತ್ತೂರು ಶ್ರೀ ವನ ಭದ್ರಕಾಳಿ ದೇವಸ್ಥಾನದ ಸಮೀಪ ಜೀತೋ ಪಿಕ್ ಅಪ್ ಮತ್ತು ಬಲೆನೋ ಕಾರಿನ ನಡುವೆ ಭೀಕರ ಡಿಕ್ಕಿ ಸಂಭವಿಸಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಜೀತೋ ಪಿಕ್ ಅಪ್ ವಾಹನದ ಚಾಲಕ ಗಾಯಗೊಂಡಿದ್ದಾರೆ. ಗಾಯಾಳು ಚಾಲಕನನ್ನು ತಕ್ಷಣ ಗೋಣಿಕೊಪ್ಪ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ಜಖಂಗೊಂಡಿವೆ.