ಗೋಣಿಕೊಪ್ಪ: ಆಗಸ್ಟ್ 09ರಂದು ಕಕ್ಕಡ 18 ಆಚರಣೆ

Jul 23, 2026 - 15:49
 0  78
ಗೋಣಿಕೊಪ್ಪ: ಆಗಸ್ಟ್ 09ರಂದು ಕಕ್ಕಡ 18 ಆಚರಣೆ

ಗೋಣಿಕೊಪ್ಪ: ಅಖಿಲ ಅಮ್ಮಕೊಡವ ಸಮಾಜ, ಕೋತೂರು ಶ್ರೀ ಕೃಷ್ಣ ಅಮ್ಮಕೊಡವ ಸಮಾಜ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ 'ಕಕ್ಕಡ–18' ಆಚರಣೆ ಕಾರ್ಯಕ್ರಮವನ್ನು ಆಗಸ್ಟ್ 9ರಂದು (ಭಾನುವಾರ) ಕಾನೂರು ಪಿ.ಎ.ಸಿ.ಎಸ್, ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ತಿಳಿಸಿದ್ದಾರೆ.

 ಕಾರ್ಯಕ್ರಮದಲ್ಲಿ ಬಾಂಧವ್ಯದ ಸಮ್ಮಿಲನ, ಸಾಂಸ್ಕೃತಿಕ ಕಲಾ ವೈಭವ, ಸಾಂಪ್ರದಾಯಿಕ ಹಾಡುಗಳ ಗಾಯನ ಹಾಗೂ ಕಕ್ಕಡ–18ರ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಭಾಗವಹಿಸುವ ಎಲ್ಲರಿಗೂ ಸೌಹಾರ್ದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಆಸಕ್ತಿ ಹೊಂದಿರುವ ಮಕ್ಕಳು ಹಾಗೂ ಹಿರಿಯರು ತಮ್ಮ ಹೆಸರುಗಳನ್ನು ಅಧ್ಯಕ್ಷೆ ಲತಾ ಗಣೇಶ್ (ಮೊ. 9449998614) ಅವರಲ್ಲಿ ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0