ಗೋಣಿಕೊಪ್ಪ: ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಗೋಣಿಕೊಪ್ಪ: ಇಲ್ಲಿನ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಿದರು. ಉಮಾಮಹೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 1999 ರಲ್ಲಿ ಹುತಾತ್ಮರಾಗಿರುವ ಎಲ್ಲಾ ಸೈನಿಕರಿಗೂ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದರು.
ಪೊನ್ನಂಪೇಟೆ ತಾಲೂಕು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಎನ್ ಆರ್ ರಾಜ, ಉಪಾಧ್ಯಕ್ಷ ಎಂ.ಎಸ್ ಸುಬ್ರಮಣಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟಿರ ಕಿಲನ್ ಗಣಪತಿ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ಸುರೇಶ್ ರೈ, ದೀಪಕ್, ಪಂಚಾಯಿತಿ ಸದಸ್ಯರುಗಳಾದ ಕೆ ಜಿ ರಾಮಕೃಷ್ಣ, ಕೊಣಿಯಂಡ ಬೋಜಮ್ಮ, ನೂರೆರ ರತಿ ಅಚಪ್ಪ, ವಿವೇಕ್ ರಾಯ್ಕರ್, ಗೀತಾ, ಮಾಜಿ ಸೈನಿಕ ಸೋಮಯ್ಯ, ರಮೇಶ್, ಪ್ರಮುಖರುಗಳಾದ ಎಂ.ಎನ್ ಗಣೇಶ್, ಧನಲಕ್ಷ್ಮಿ, ಸತೀಶ್ ರೈ, ಸಿ.ಬಿ ದೇವಯ್ಯ (ಮನು), ಸುಬ್ರಮಣಿ, ನೂರೆರ ರವಿ, ಸಂಧ್ಯಾ, ಜ್ಯೋತಿ, ಕಾರ್ತಿಕ್, ಚಿಮ್ಮಣ್ಣ, ಶಿವು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
