ಗೋಣಿಕೊಪ್ಪ; ಗ್ರಾಮೀಣ ಕ್ರೀಡಾಕೂಟಕ್ಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಾಲನೆ

Feb 24, 2026 - 16:40
 0  209
ಗೋಣಿಕೊಪ್ಪ; ಗ್ರಾಮೀಣ ಕ್ರೀಡಾಕೂಟಕ್ಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚಾಲನೆ

ಗೋಣಿಕೊಪ್ಪ : ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು ದತ್ತಿನಿಧಿ ಸ್ಥಾಪಿಸಿದ ಉದ್ದೇಶವನ್ನು ಈಡೇರಿಸಲಾಯಿತು.

 ಮಕ್ಕಳು ಕಪ್ಪೆ ಓಟ, ಬಾಲ್ ಹಾಕುವುದು, ವಿಷದ ಚೆಂಡು, ರಿಂಗ್ ಎಸೆತ, ಟಿನ್ ಒಡೆಯುವುದು ಸೇರಿದಂತೆ ಹಲವಾರು ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಅನುಭವಿಸಿದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ನೇತೃತ್ವದಲ್ಲಿ ಕ್ರೀಡೆಗಳು ನಡೆದವು.

ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಹಿರಿಯ ಪತ್ರಕರ್ತ ಎನ್.ಎನ್ ದಿನೇಶ್, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ ಕುಮಾರ್, ಸಹ ಶಿಕ್ಷಕರುಗಳಾದ ಕಲಾ ಶಿಕ್ಷಕ ಸತೀಶ್ ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್ .ಕೆ, ಇಂದಿರಾ ಎಂ.ಸಿ, ಅನಿತಕುಮಾರಿ ಹೆಚ್.ಇ. ದಮಯಂತಿ ಎ.ಎಮ್, ಅರ್ಶಿಯಾ.ಬಿ, ಕ್ಲ್ಯೆಮಿಂಟನ್, ಸಹನ್ ಎಂ.ಬಿ, ಶಾರದ ಕೆ ಎಸ್, ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು,ಎನ್, ಮಂಜುಳ ವಿ ವಿದ್ಯಾರ್ಥಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0