ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕದ ಅಧ್ಯಕ್ಷ ಎಂಬ ಎರಡು ಪ್ರಶಸ್ತಿ

Dec 22, 2025 - 17:50
Dec 23, 2025 - 10:11
 0  359
ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕದ ಅಧ್ಯಕ್ಷ ಎಂಬ ಎರಡು ಪ್ರಶಸ್ತಿ

ಗೋಣಿಕೊಪ್ಪ,: ಅತ್ಯುತ್ತಮ ಘಟಕ ಮತ್ತು ಅತ್ಯುತ್ತಮ ಘಟಕದ ಅಧ್ಯಕ್ಷ ಎಂಬ ಎರಡು ಪ್ರಶಸ್ತಿಗಳನ್ನು ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪಡೆದುಕೊಂಡಿದೆ. ಹಾಸನ ಜಿಲ್ಲೆಯ ಹೋಟೆಲ್ ಸುವರ್ಣ ಭವನದಲ್ಲಿ ನಡೆದ ವಲಯ ಮಟ್ಟದ ಸಮ್ಮೇಳನದಲ್ಲಿ ಗೋಣಿಕೊಪ್ಪ ಸೀನಿಯರ್ ಚೇಂಬರ್ ಸಂಸ್ಥೆ, ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಂದ ಗಮನ ಸೆಳೆದು ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ಅಧ್ಯಕ್ಷ ಬಿಎನ್ ಪ್ರಕಾಶ್ ಘಟಕದ ಅತ್ಯುತ್ತಮ ಅಧ್ಯಕ್ಷ ಎಂಬ ಪ್ರಶಸ್ತಿಯನ್ನು ಗಳಿಸಿಕೊಂಡರು.

 ಸಮಾಜಮುಖಿಯಾಗಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗಮನ ಸೆಳೆದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಗೋಣಿಕೊಪ್ಪ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಾಗೇಶ್ ವರ್ಣೇಕರ್ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ರಾಷ್ಟ್ರೀಯ ಅಧ್ಯಕ್ಷ ಎಮ್ ಆರ್ ಜಯೇಶ್, ಮುಖ್ಯ ಭಾಷಣಕಾರಾಗಿದ್ದ, ಎಂ.ಕೆ ಗೋವರ್ಧನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ವಾಸುದೇವನ್, ಖಜಾಂಜಿ ಸಂಪತ್ ಕುಮಾರ್, ಪ್ರಮುಖರುಗಳಾದ ಗೀತಾಲತ, ಚಿತ್ರ ಕುಮಾರ್, ಡಾ. ಅರವಿಂದ್ ರಾವ್, ಜಗದೀಶ್ ವಿ.ಎನ್, ನಾಗೇಶ್, ರವಿ ಕೆಎನ್, ಗಿರೀಶ್ ಗೌಡ, ಭಾನುಮತಿ, ಹಲವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0