ಗೋಣಿಕೊಪ್ಪ: ಯುವಕ ನಾಪತ್ತೆ!
ಗೋಣಿಕೊಪ್ಪ; ದಿನಾಂಕ:09-02-2026 ರಂದು ಮಧ್ಯಾಹ್ನ 13.00 ಗಂಟೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಹಾಜರಾಗಿ, ನನ್ನ ಮಗಳು ಮಮತಳು ಆಕೆಯ ಮಗ ಅಭಿಷೇಕನ ಹೆರಿಗೆಯಾದ ಸಮಯದಲ್ಲಿ ಮೃತಪಟ್ಟಿರುತ್ತಾಳೆ.
ಆಗಿನಿಂದಲೂ ಅಭಿಷೇಕನನ್ನು ನಾನು ನನ್ನೊಂದಿಗೆ ನೋಡಿಕೊಂಡಿರುತ್ತೇನೆ. ನನ್ನ ಮೊಮ್ಮಗ ಅಭಿಷೇಕನಿಗೆ ಈಗ 17 ವರ್ಷ ಪ್ರಾಯವಾಗಿರುತ್ತದೆ. ಅಭಿಷೇಕನು ದಿನಾಂಕ:04-12-2025 ರಂದು ಮಧ್ಯಾಹ್ನ ಮಧ್ಯಾಹ್ನ 3.00 ಗಂಟೆಗೆ ಮೈಸೂರಿನ ನನ್ನ ಮಗ ಸತೀಶನ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದು, ಸಂಜೆ ನಾನು ನನ್ನ ಮಗ ಸತೀಶನಿಗೆ ಫೋನ್ ಮಾಡಿ ವಿಚಾರಿಸಿದಾಗ ಅಭಿಷೇಕನು ಮೈಸೂರಿಗೆ ಬಂದಿರುವುದಿಲ್ಲ ಎಂದು ತಿಳಿಸಿದನು.
ನಂತರ ನಾನು ನೆಂಟರಿಷ್ಟರಲ್ಲಿ ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಮಾಡಿ ನೋಡಿದಲ್ಲೂ ನನ್ನ ಮೊಮ್ಮಗ ಅಭಿಷೇಕನು ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಅಪ್ರಾಪ್ತ ಬಾಲಕ ನನ್ನ ಮೊಮ್ಮಗ ಅಭಿಷೇಕನನ್ನು ಪತ್ತೆಮಾಡಿಕೊಡುವಂತೆ ದೂರು ನೀಡಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೇಲ್ಕಂಡ ಉಲ್ಲೇಖದ ರೀತ್ಯಾ ಪ್ರಕರಣ ದಾಖಲಾಗಿದ್ದು, ಪ್ರಕರಣವು ತನಿಖೆಯಲ್ಲಿರುತ್ತದೆ.
ಕಾಣೆಯಾಗಿರುವ ಬಾಲಕನ ಚಹರೆ ಪಟ್ಟಿ: 1) ಹೆಸರು : ಅಭಿಷೇಕ್ ತಂದೆ ಪೌತಿ ರಮೇಶ 2) ಪ್ರಾಯ : 17 ವರ್ಷ 3) ಎತ್ತರ; 5.2 ಅಡಿ 4) ಶರೀರ : ತೆಳ್ಳಗಿನ ಶರೀರ 5) ಬಣ್ಣ : ಗೋಧಿ ಮೈಬಣ್ಣ, 6) ಗುರುತು: ಚಿಗುರು ಮೀಸೆ, ಕುರುಚಲು ಗಡ್ಡ, 7) ಮಾತನಾಡುವ ಭಾಷೆ: ಕನ್ನಡ 8) ಧರಿಸಿದ ಬಟ್ಟೆ:- ಹಸಿರು ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಕಾಣೆಯಾದ ಬಾಲಕ ಪತ್ತೆಯಾದಲ್ಲಿ ಈ ಕೆಳಕಂಡ ದೂರವಾಣಿ ಸಂಪರ್ಕಕ್ಕೆ ಸಂಪರ್ಕಿಸುವಂತೆ ಕೋರಿದ್ದಾರೆ. 08274-247333, 9480804957 08274-247333, 9480804935 08274-257488, 9480804922 08272-229000
What's Your Reaction?
Like
0
Dislike
0
Love
0
Funny
0
Angry
0
Sad
2
Wow
0
