ಗೋಣಿಕೊಪ್ಪ:ಖಾಸಗಿ ಬಸ್ಸ್ ಮತ್ತು ಬೈಕ್ ನಡುವೆ ಅಪಘಾತ,ಇಬ್ಬರು ಯುವಕರು ಸಾವು

Feb 6, 2026 - 12:11
 0  4k
ಗೋಣಿಕೊಪ್ಪ:ಖಾಸಗಿ ಬಸ್ಸ್ ಮತ್ತು ಬೈಕ್ ನಡುವೆ ಅಪಘಾತ,ಇಬ್ಬರು ಯುವಕರು ಸಾವು

ಗೋಣಿಕೊಪ್ಪ;ಗುರುವಾರ ರಾತ್ರಿ ಖಾಸಗಿ ಬಸ್ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಗೋಣಿಕೊಪ್ಪಲಿನ ಸುಲೈಮಾನ್(32),ಪೌಲೋಸ್ (28) ಇಬ್ಬರು ಮೃತಪಟ್ಟಿರುವ ಘಟನೆ ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಾಲಯದ ಮುಖ್ಯ ರಸ್ತೆಯಲ್ಲಿ ನಡೆದಿದೆ. ಸುಲೈಮಾನ್‌ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಬೈಕ ಸವಾರ ಗಂಭೀರ ಗಾಯಗೊಂಡ ಚೆನ್ನಂಗೊಲ್ಲಿ ನಿವಾಸಿ ಪೌಲೋಸ್ ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ಮೈಸೂರಿಗೆ ಕರೆದೊಯ್ಯುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ‌. ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

What's Your Reaction?

Like Like 5
Dislike Dislike 0
Love Love 1
Funny Funny 0
Angry Angry 0
Sad Sad 10
Wow Wow 0