ಗೋಣಿಕೊಪ್ಪ: ಇನ್ನೋವಾ ಕಾರು ಮರಕ್ಕೆ ಡಿಕ್ಕಿ:ಡ್ರೈವರ್ ಸ್ಥಳದಲ್ಲೇ ಸಾವು

ಗೋಣಿಕೊಪ್ಪ: ಇನ್ನೋವಾ ಕಾರು ಮರಕ್ಕೆ ಡಿಕ್ಕಿ:ಡ್ರೈವರ್ ಸ್ಥಳದಲ್ಲೇ ಸಾವು

ಗೋಣಿಕೊಪ್ಪ: ಇನೋವಾ ಕಾರು ಮರಕ್ಕೆ ಡಿಕ್ಕಿಯಾಗಿ ಡ್ರೈವರ್ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ. ಮೈಸೂರುನಿಂದ ವಿರಾಜಪೇಟೆಗೆ ಬರುತ್ತಿದ್ದ ಇನೋವಾ ಕಾರು ಅಪಘಾತಗೊಂಡಿದೆ. ಇನೋವಾ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ತಿತಿಮತಿ - ಗೋಣಿಕೊಪ್ಪ ಮುಖ್ಯ ರಸ್ತೆಯ ಚೆನ್ನಂಗೊಲ್ಲಿಯಲ್ಲಿ ನಡೆದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ 6 ಜನರಲ್ಲಿ ಡ್ರೈವರ್ ಸ್ಥಳದಲ್ಲೇ ಸಾವನಪ್ಪಿದ್ದು,ಇಬ್ಬರು ಗಂಭೀರ ಗಾಯ, ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂವರು ಪ್ರಾಣಪಾಯದಿಂದ ಪಾರಾಗಿದೆ. ಗೋಣಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.