ಗುಡ್ ಫ್ರೈಡೆ ಆಚರಣೆ:ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ಗೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

Apr 3, 2026 - 10:25
 0  175
ಗುಡ್ ಫ್ರೈಡೆ ಆಚರಣೆ:ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‌ಗೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

ವಿರಾಜಪೇಟೆ;ಪವಿತ್ರ ಗುಡ್ ಫ್ರೈಡೆ ಆಚರಣೆ ಪ್ರಯುಕ್ತ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ವಿರಾಜಪೇಟೆಯ ಸಂತ ಅನ್ನಮ್ಮನ ದೇವಾಲಯಕ್ಕೆ ಇಂದು ಭೇಟಿ ನೀಡಿದರು.

 ಚರ್ಚ್ ನಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ಬಳಿಕ, ಯೇಸು ಕ್ರಿಸ್ತನಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ನಮಿಸಿದರು. ಇದೇ ಸಂದರ್ಭದಲ್ಲಿ ಗುಡ್ ಫ್ರೈಡೆ ಆಚರಣೆ ಪ್ರಯುಕ್ತ ಅನಾಥ ಆಶ್ರಮಕ್ಕೆ ನೀಡುವ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು.

ಈ ದಿನವೂ ನಾಡಿನ ಎಲ್ಲರಿಗೂ ಶುಭವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಧರ್ಮ ಗುರುಗಳು, ಪ್ರಮುಖರಾದ ಜೋಕಿಂ ರೋಡರಿಗಸ್, ಮರ್ವಿನ್ ಲೋಬೋ, ಜೇವಿಯರ್, ಹ್ಯಾಂಸಿ, ಮಾರ್ಟಿನ್, ಡೇನಿಯಲ್, ಜಗನ್, ರಿಯಾನ್ ಲೋಬೋ, ಚಾರ್ಲ್ಸ್ ಡಿಸೋಜ, ಮೆಲ್ರೋಯ್ ಲೋಬೊ,ಕುಂಡಚ್ಚಿರ ಮಂಜುದೇವಯ್ಯ, ಮೊದಲಾದವರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0