Kodagu

ಸರ್ಕಾರಿ ನೌಕರರ ಕ್ರೀಡಾಕೂಟ; ಅರಣ್ಯ ಇಲಾಖೆ ತಂಡ ಚಾಂಪಿಯನ್

admincoorgdaily

ಸರ್ಕಾರಿ ನೌಕರರ ಕ್ರೀಡಾಕೂಟ;    ಅರಣ್ಯ ಇಲಾಖೆ ತಂಡ ಚಾಂಪಿಯನ್

ಕುಶಾಲನಗರ;ಎರಡು ದಿನಗಳಿಂದ ನಡೆದ ಅದ್ಧೂರಿ ಸರ್ಕಾರಿ ನೌಕರ ಕ್ರಿಕೆಟ್ ಪಂದ್ಯಾವಳಿಯು ಸರ್ಕಾರಿ ಪಿಎಂಸಿ ಶಾಲಾ ಮೈದಾನದಲ್ಲಿ ನಡೆಯಿತು.ಬಹುಮಾನ ವಿತರಣೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿ ಕ್ರೀಡೆಯು ಸ್ನೇಹವನ್ನು ಬೆಸೆಯುತ್ತದೆ ಆದುದರಿಂದ ಇಂತಹ ಕ್ರೀಡಾಕೂಟಗಳು ಮುಂದೆಯೂ ಮುಂದುವರಿಸಬೇಕೆಂದು ಸರ್ಕಾರಿ ನೌಕರರಿಗೆ ಮನವಿ ಮಾಡಿದರು.

ಇದೇ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ,ತಾಲೂಕು ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ವಿ.ಪಿ ಶಶಿಧರ್, ಸೋಮವಾರಪೇಟೆ ದಂಡಾಧಿಕಾರಿಗಳಾದ ಕೃಷ್ಣಮೂರ್ತಿ ಕ್ರೀಡೆಯ ವ್ಯವಸ್ಥಾಪಕರಾದ, ಸೈಜನ್ ಕೆ ಪೀಟರ್,ವಕೀಲರಾದ ಶಿವಮೂರ್ತಿ ಶಿಕ್ಷಕರಾದ ರತ್ನ ಕುಮಾರ್. ಹಾರಿದ್ದರು.