ಗೌಡ ಕುಟುಂಬವಾರು ಕ್ರಿಕೆಟ್ ಪಂದ್ಯಾಟ; 8 ತಂಡಗಳು ಕ್ವಾರ್ಟರ್ ಫೈನಲ್‌ಗೆ
ಮಡಿಕೇರಿ, ಏ. 23; ಮರಗೋಡುವಿನ ಗೌಡ ಇವಿನಿಂಗ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗೌಡ ಸಮುದಾಯಗಳ ನಡುವೆ ಏರ್ಪಡಿಸಲಾಗಿರುವ - ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಂಟು ಕುಟುಂಬ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.
ಗುರುವಾರ ನಡೆದ ಪಂದ್ಯದಲ್ಲಿ ಸಣ್ಣಜನ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದರೆ, ಕುಯ್ಯಮುಡಿ ತಂಡ - ರೋಚಕ ಹಣಾಹಣಿಯೊಂದಿಗೆ 4 ವಿಕೆಟ್ ಕಳೆದುಕೊಂಡು 77ರನ್ - ಗಳಿಸಿ ಕೇವಲ ಒಂದು ರನ್‌ಗಳ ಅಂತರದಿಂದ ಸೋಲನುಭವಿಸಿತು.
ಉಳುವಾರನ ತಂಡ ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್‌ಗೆ 95 ರನ್ ಗಳಿಸಿದರೆ, ಪೊನ್ನಚನ ತಂಡ 8 ವಿಕೆಟ್‌ಗೆ 54 ರನ್ ಗಳಿಸಿ 45 ರನ್‌ಗಳ = ಅಂತರದಿಂದ ಸೋಲನುಭವಿಸಿತು.
ಪಾಣತ್ತಲೆ ತಂಡ 4 ವಿಕೆಟ್‌ಗೆ 63 -ರನ್ ಗಳಿಸಿದರೆ, ಕೊಂಬಂಡ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕುಡೆಕಲ್ಲು ತಂಡ 4 ವಿಕೆಟ್‌ಗೆ ಭರ್ಜರಿ 111 ರನ್ ಗಳಿಸಿದರೆ, = ಉತ್ತರವಾಗಿ ಆಡಿದ ಕಟ್ಟೆಮನೆ ತಂಡ 6 ವಿಕೆಟ್‌ಗೆ 65 ರನ್ ಮಾತ್ರ - ಗಳಿಸಿ 46 ರನ್‌ಗಳ ಭಾರೀ ಅಂತರದಿಂದ ಸೋಲನುಭವಿಸಿತು.
ಎಡಿಕೇರಿ ತಂಡ 3 ವಿಕೆಟ್ ಗೆ 70 ರನ್ ಗಳಿಸಿದರೆ, ಇಳಂದಿಲ ತಂಡ 6 ವಿಕೆಟ್‌ಗಳ ಜಯ ಸಾಧಿಸಿತು. ಪರ್ಲಕೋಟಿ ತಂಡ 3 ವಿಕೆಟ್‌ಗೆ 75 ರನ್ ಗಳಿಸಿದರೆ, ಬಿದ್ರುಪಣೆ ತಂಡ 6 ವಿಕೆಟ್‌ಗೆ 33 ರನ್ ಮಾತ್ರ ಗಳಿಸಿ ಸೋಲಿಗೆ ಶರಣಾಯಿತು. ಮೇಲೆಂಬು ತಂಡ 6 ವಿಕೆಟ್‌ಗೆ 49 ರನ್ ಗಳಿಸಿದರೆ, ಅಮೆಮನೆ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು.
ಚೀಯಪ್ಪನ ತಂಡ 5 ವಿಕೆಟ್‌ಗೆ 78ರನ್ ಗಳಿಸಿದರೆ, ಸಣ್ಣಜನ ತಂಡ 4 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತೆಕ್ಕಡೆ ತಂಡ 4 ವಿಕೆಟ್‌ಗೆ 55 ರನ್ ಗಳಿಸಿದರೆ, ತಳೂರು ತಂಡ 4 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು.
ಇಂದಿನ ಕ್ವಾರ್ಟರ್ ಫೈನಲ್
ಉಳುವಾರನ v/s ಕೊಂಬಂಡ
ಕುಡೆಕಲ್ಲು v/s ಇಳಂದಿಲ
ಪರ್ಲಕೋಟಿ v/s ಅಮೆಮನೆ
ಸಣ್ಣಜನ v/s ತಳೂರು