ಕೊಳಕೇರಿಯಲ್ಲಿ ಕೆಎಲ್‌ಕೆ ಟೌನ್ ಬ್ರದರ್ಸ್ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಕೂಟ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಬಳಿಯ ಕೊಳಕೇರಿಯಲ್ಲಿ ಕೆ ಎಲ್ ಕೆ ಬ್ರದರ್ಸ್ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಮೂರನೇ ವರ್ಷದ ಗ್ರ್ಯಾಂಡ್ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು.
ಕೊಳಕೇರಿ ಜುಮಾ ಮಸೀದಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಸೀದಿಯ ಖತೀಬರಾದ ಅಶ್ರಫ್ ಅಹ್ಸನಿ ಖಾಮಿಲ್ ಸಖಾಫಿ ಅವರು ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭ ಕೊಳಕೇರಿ ಜಮಾಅತ್ ಅಧ್ಯಕ್ಷರಾದ ಎ.ಎ.ಅಶ್ರಫ್, ಕಾರ್ಯದರ್ಶಿ ಎಂ.ಎಚ್.ರಫೀಕ್, ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಂಡ್ ಇಫ್ತಾರ್ ಕೂಟದ ಆಯೋಜಕರಾದ ಫಾರೂಕ್, ಹುಸೈನ್, ಶಮ್ಮಾಸ್, ಫಝಲ್ ರಹ್ಮಾನ್, ಇಸ್ಮಾಯಿಲ್, ಉನೈಸ್, ಜಲಾಲ್ ಸೇರಿದಂತೆ ಇಫ್ತಾರ್ ಕೂಟದಲ್ಲಿ ಗ್ರಾಮದ ಹಿರಿಯರು,ಗಣ್ಯರು ಮತ್ತಿತರರು ಪಾಲ್ಗೊಂಡಿದ್ದರು.