ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ಅತ್ಯಾಚಾರ:ಅಪರಾಧಿ ಅಜ್ಜನಿಗೆ 20 ವರ್ಷ ಕಠಿಣ ಸಜೆ
ಮಡಿಕೇರಿ:ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಮಡಿಕೇರಿ ನಿವಾಸಿ ಮಹಾದೇವ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಡಗು, ಮಡಿಕೇರಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆ ಹಿನ್ನೆಲೆ :
ಅಪ್ರಾಪ್ತ ನೊಂದಬಾಲಕಿಯ ತಂದೆ ತೀರಿಹೋದ ನಂತರ ಆಕೆಯ ತಾಯಿಯು ಎರಡನೇ ಮದುವೆಯಾಗಿದ್ದು, ಆಕೆಯ ತಾಯಿಯು ತೀರಿ ಹೋದ ನಂತರ ನೊಂದ ಬಾಲಕಿಯ ಮಲ ತಂದೆ ನೊಂದಬಾಲಕಿಯನ್ನು ಮಕ್ಕಳ ಗೃಹಕ್ಕೆ ಬಿಟ್ಟು ಹೋಗಿದ್ದು, ನೊಂದಬಾಲಕಿಯ ಮಲ ತಂದೆಯ ತಂದೆ ಯಾದ ಅಪರಾಧಿ ಮಹಾದೇವ ಈತನು ಮಕ್ಕಳ ಗೃಹದಿಂದ ನೊಂದ ಬಾಲಕಿ ಹಾಗೂ ಆಕೆಯ ತಂಗಿಯನ್ನು ನೋಡಿಕೊಳ್ಳುವ ನೆಪ ಮಾಡಿ ಕರೆದುಕೊಂಡು ಹೋಗಿದ್ದ.
ನಂತರದ ದಿನಗಳಲ್ಲಿ ನೊಂದ ಬಾಲಕಿಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ ಎಸಗಿದ್ದು ಈ ವಿಚಾರವನ್ನು ನೊಂದ ಬಾಲಕಿ ತನ್ನ ಶಾಲಾ ಶಿಕ್ಷಕಿಗೆ ತಿಳಿಸಿದ್ದು, ನೊಂದಬಾಲಕಿಯ ಶಾಲಾ ಶಿಕ್ಷಕಿ ನೀಡಿದ ದೂರಿನ ಸಂಬಂಧ ಮಡಿಕೇರಿಯ ಕೊಡಗು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆಯನ್ನು ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹೆಚ್.ಎಂ ಇವರು ನಡೆಸಿ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಷ್ಟೋ ಕಾಯ್ದೆ ಅಡಿಯ ಅಪರಾಧಕ್ಕಾಗಿ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌ।। ಸುರೇಂದ್ರ ಜಿ ಇವರು ವಿಚಾರಣೆ ಕೈಗೊಂಡು ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
ಲೈಂಗಿಕ ಅತ್ಯಾಚಾರ ಅಪರಾಧಕ್ಕೆ ಪೋಳ್ಳೋ ಕಾಯ್ದೆ ಅಡಿಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಸಜೆ ಮತ್ತು Rs.20,000/- ದಂಡ,, ನೊಂದಬಾಲಕಿಗೆ ಒಂಬತ್ತು ಲಕ್ಷ ಪರಿಹಾರ ನೀಡಬೇಕೆಂದು ತೀರ್ಪು ನೀಡಿ ಆದೇಶಿಸಿದ್ದಾರೆ.ಸರಕಾರದ ಪರ ವಿಶೇಷ ಅಭಿಯೋಜಕರಾದ ಬಿ ಎಸ್ ರುದ್ರ ಪ್ರಸನ್ನ ವಾದ ಮಂಡಿಸಿರುತ್ತಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
