ಕೊಡಗು ವಿದ್ಯಾಲಯದಲ್ಲಿ ಅಜ್ಜ-ಅಜ್ಜಿಯರ ದಿನದ ಸಂಭ್ರಮಾಚರಣೆ

Feb 15, 2026 - 16:59
 0  776
ಕೊಡಗು ವಿದ್ಯಾಲಯದಲ್ಲಿ ಅಜ್ಜ-ಅಜ್ಜಿಯರ ದಿನದ ಸಂಭ್ರಮಾಚರಣೆ

ಮಡಿಕೇರಿ ಫೆ.15 - ನಗರದ ಕೊಡಗು ವಿದ್ಯಾಲಯದ ಪ್ಲೇ ಹೋಂ, ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳ ವತಿಯಿಂದ ಅಜ್ಜ-ಅಜ್ಜಿಯರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಶನಿವಾರ ಆಯೋಜಿತ ಕಾರ್ಯಕ್ರಮದಲ್ಲಿ ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೊಂತಿ ಗಣೇಶ್ ಪಾಲ್ಗೊಂಡು ಮಾತನಾಡಿ, , ಅಜ್ಜ-ಅಜ್ಜಿಯರ ಮಹತ್ವವನ್ನು ಮಕ್ಕಳ ಜೀವನದಲ್ಲಿ ವಿವರಿಸಿದರು. ಕುಟುಂಬ ಮೌಲ್ಯಗಳನ್ನು ಬೆಳೆಸುವಲ್ಲಿ ಹಿರಿಯರ ಪಾತ್ರ ಅತ್ಯಂತ ಮುಖ್ಯವೆಂದು ಅವರು ತಮ್ಮ ಮೌಲ್ಯಯುತ ಮಾತುಗಳಲ್ಲಿ ತಿಳಿಸಿದರು.

 ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಮನಮುಟ್ಟುವ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು. ವಿಶೇಷ ಆಕರ್ಷಣೆಯಾಗಿ ಮೊಮ್ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಸೇರಿ ಕೈ ಗುರುತು ಚಟುವಟಿಕೆಯಲ್ಲಿ ಭಾಗವಹಿಸಿ ಸ್ಮರಣೀಯ ಕ್ಷಣಗಳನ್ನು ರೂಪಿಸಿದರು.

ನಂತರ ಅಜ್ಜ-ಅಜ್ಜಿಯರಿಗಾಗಿ ವಿಶೇಷ ಆಟವನ್ನು ಆಯೋಜಿಸಲಾಗಿದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಯ೯ಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಶಿಕ್ಷಕರೂ ಸಂಭ್ರಮದಿಂದ ಪಾಲ್ಗೊಂಡರು.

 ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಸುಮಿತ್ರ ಕೆ ಎಸ್, ಆಡಳಿತ ನಿರ್ವಹಣಾಧಿಕಾರಿ ರವಿ ಪಿ, ಸಂಯೋಜಕಿ ಭಾರತಿ ಕೆ ಉಪಸ್ಥಿತರಿದ್ದರು. ಶಿಕ್ಷಕಿ ಜಯಶ್ರೀ ಟಿ ನಿರೂಪಿಸಿದರು. , ಈ ಕಾರ್ಯಕ್ರಮವು ಮಕ್ಕಳಿಗೆ ಮತ್ತು ಅಜ್ಜ-ಅಜ್ಜಿಯರಿಗೆ ಆತ್ಮೀಯತೆ, ಸಂತೋಷ ಮತ್ತು ಸಂಸ್ಕಾರದ ಸಂದೇಶವನ್ನು ನೀಡಿದ ಸ್ಮರಣೀಯ ದಿನವಾಗಿ ಉಳಿಯಿತು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1