ಮೂರ್ನಾಡು ಸರ್ಕಾರಿ ಶಾಲೆಯಲ್ಲಿ ಗ್ರೀನ್ ಡೇ ಹಾಗೂ ಇಂಗ್ಲೀಷ್ ಫೇರ್ ಕಾರ್ಯಕ್ರಮ

Dec 20, 2025 - 09:11
Dec 20, 2025 - 11:06
 0  162
ಮೂರ್ನಾಡು ಸರ್ಕಾರಿ ಶಾಲೆಯಲ್ಲಿ ಗ್ರೀನ್ ಡೇ ಹಾಗೂ ಇಂಗ್ಲೀಷ್ ಫೇರ್ ಕಾರ್ಯಕ್ರಮ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಮೂರ್ನಾಡುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಗ್ರೀನ್ ಡೇ ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಗತಿ ಪ್ರಥಮ್ ಮೈಸೂರ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಇಂಗ್ಲಿಷ್ ಪೇರ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ವೆಂಕಪ್ಪನವರು ಉದ್ಘಾಟಿಸಿದರು.

ಗ್ರೀನ್ ಡೇ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಪರಿಸರ ಜ್ಞಾನ, ಬಣ್ಣಗಳ ಪರಿಚಯ, ಹಸಿರು ಬಣ್ಣದ ತರಕಾರಿಗಳು ಮತ್ತು ಬಣ್ಣಗಳ ವಸ್ತುಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಹಸಿರು ಬಣ್ಣದ ವಿವಿಧ ಬಗೆಯ ತರಕಾರಿ ಹಾಗೂ ಹಣ್ಣುಗಳನ್ನು ಪ್ರದರ್ಶಿಸಿದರು. ಬಳಿಕ ಚದ್ಮ ವೇಷ ಧರಿಸಿದ ಪುಟಾಣಿ ಮಕ್ಕಳು ಅವುಗಳ ಬಗ್ಗೆ ವಿವರಣೆ ನೀಡಿದರು. ಪ್ರಥಮ್ ಮೈಸೂರ್ ಸಂಸ್ಥೆ ವತಿಯಿಂದ ಆಯೋಜಿಸಲಾದ ಇಂಗ್ಲೀಷ್ ಫೇರ್ ಕಾರ್ಯಕ್ರಮದಲ್ಲಿ ಕೇವಲ 40 ದಿನಗಳ ಕಾಲ ಕಾವ್ಯ ಎಂಬ ಶಿಕ್ಷಕಿಯನ್ನು ನೇಮಿಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾತನಾಡಲು ತರಬೇತಿ ನೀಡಿದರು.ಇದರಿಂದ ಮಕ್ಕಳು ಧೈರ್ಯವಾಗಿ ಇಂಗ್ಲಿಷ್ ನಲ್ಲಿ ಮಾತನಾಡಲು ಸಹಾಯವಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳು ಇಂಗ್ಲಿಷ್ ಕಲಿಕೋಪಕರಣ ಪ್ರದರ್ಶಿಸಿ ಅದರ ವಿವರಣೆಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎಚ್.ಆರ್. ಪ್ರೇಮಾಕುಮಾರಿ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭ ಶಾಲೆಯ ಉಪಾಧ್ಯಕ್ಷರಾದ ಲೋಕೇಶ್, ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಮಾನ್ಯ ಸ್ವಾಗತಿಸಿ, ನಿರೀಕ್ಷ, ಈಶಾನ್ ಗೌಡ ನಿರೂಪಿಸಿ, ಮನೀಶ್ ಸರ್ವರನ್ನು ವಂದಿಸಿದರು.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 1