ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರುಕಾರೋಣ ತೆರೆ; ಸಂಪ್ರದಾಯ ಸಂರಕ್ಷಣೆಯಲ್ಲಿ ಐನ್ ಮನೆಗಳ ಪಾತ್ರ ಮಹತ್ವದ್ದು; ಎ.ಎಸ್. ಪೊನ್ನಣ್ಣ

May 16, 2026 - 09:03
 0  255
ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರುಕಾರೋಣ ತೆರೆ;   ಸಂಪ್ರದಾಯ ಸಂರಕ್ಷಣೆಯಲ್ಲಿ ಐನ್ ಮನೆಗಳ ಪಾತ್ರ ಮಹತ್ವದ್ದು; ಎ.ಎಸ್. ಪೊನ್ನಣ್ಣ

ಮಡಿಕೇರಿ ಮೇ 15 - ಚೇರಂಬಾಣೆ ಬೇಂಗೂರು ಗ್ರಾಮದಲ್ಲಿರುವ ಪಟ್ಟಮಾಡ ಕುಟುಂಬದ ಐನ್ ಮನೆಯಲ್ಲಿ ಗುರು ಕಾರೋಣ ತೆರೆ ಆಯೋಜಿತವಾಗಿತ್ತು. ಕಾರೋಣ, ಕೊಡಿಭೀರ, ಭೈರವ, ಕುಟ್ಟಿಚಾತ, ಕರಿಬಾಳ್ ಭಗವತಿ, ನುಚ್ಚುಟ್ಟಿ ಈತ್ ಕುಳಿಯ, ಧಮ೯ದೇವತೆ, ಪಂಜುರುಳಿ ಅಂಗಾರ, ಪಾಷಣಮೂತಿ೯ ಕುಳಿಯ ತೆರೆಗಳು ಈ ಸಂದಭ೯ ಜರುಗಿದವು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಪಟ್ಟಮಾಡ ಕುಟುಂಬದ ಐತಿಹಾಸಿಕ ಐನ್ ಮನೆಗೆ ಭೇಟಿ ನೀಡಿ, ಕೊಡಗಿನ ಸಂಸ್ಕೖತಿ ಮತ್ತು ಪರಂಪರೆಯಾಗಿರುವ ಐನ್ ಮನೆಗಳನ್ನು ಪದ್ದತಿಯೊಂದಿಗೆ ಸಂರಕ್ಷಿಸುವ ಕೆಲಸಕ್ಕೆ ತಾನು ಸವ೯ ರೀತಿಯ ನೆರವನ್ನು ನೀಡುತ್ತಾ ಬಂದಿದ್ದೇನೆ ಎಂದರು.

 ಐನ್ ಮನೆಗಳಲ್ಲಿ ಆಯೋಜಿತವಾಗುವ ಇಂಥ ಸಂಸ್ಕೖತಿ, ಪರಂಪರೆಯ ಧಾಮಿ೯ಕ ಕಾಯ೯ಕ್ರಮಗಳು ಯುವಪೀಳಿಗೆಯಲ್ಲಿ ಉತ್ತಮ ಸಂಸ್ಕಾರ ರೂಪಿಸಲು ನೆರವಾಗುತ್ತದೆ ಎಂದು ಶ್ಲಾಘಿಸಿದರು.

 ಈ ಸಂದಭ೯ ವಿಧಾನಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನೀಲ್ ಸುಬ್ರಹ್ಮಣಿ, ಪಟ್ಟಮಾಡ ಕುಟುಂಬದ ಪಟ್ಟೇದಾರ ಡಿಕ್ಕಾ ಕಾಳಪ್ಪ, ಕುಟುಂಬ ಸಮಿತಿ ಅಧ್ಯಕ್ಷ ಪಿ.ಡಿ.ಪೊನ್ನಪ್ಪ, ಕಾಯ೯ದಶಿ೯ ಬೋಪಣ್ಣ, ನಿದೇ೯ಶಕರಾದ ಹೇಮ್ ಮಾದಪ್ಪ, ಸತೀಶ್ ಸುಬ್ಬಯ್ಯ, ಮುತ್ತಣ್ಣ, ವಿಜು, ಡೀನಾ, ಗಿರಿ, ಮಧು, ವಿಜಯ್, ತಂಗಮ್ಮ, ಸೀತಮ್ಮ ಕಮಲಾಕ್ಷಿ ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0