ನಾಳೆ ಚೆರಿಯಪರಂಬುವಿನಲ್ಲಿ ಹಜ್ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಸಮಾರಂಭ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಕೂರ್ಗ್ ಜಂಇಯ್ಯತುಲ್ ಉಲಮಾ ಮಡಿಕೇರಿ ಝೋನ್ ಸಮಿತಿಯ ವತಿಯಿಂದ ಹಜ್ ಯಾತ್ರಾರ್ಥಿಗಳಿಗೆ ಹಜ್ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಏ.7ರ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಚೆರಿಯಪರಂಬು ಶಾದಿ ಮಹಲ್ ಸಭಾಂಗಣದಲ್ಲಿ ಅಬ್ದುಲ್ ರಶೀದ್ ದಾರಿಮಿ ಕಣ್ಣೂರು ಇವರ ನೇತೃತ್ವದಲ್ಲಿ ಹಜ್ ತರಬೇತಿ ಶಿಬಿರ ನಡೆಯಲಿದೆ. ಹಜ್ ಯಾತ್ರಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೂರ್ಗ್ ಜಂಇಯ್ಯತುಲ್ ಉಲಮಾ ಮಡಿಕೇರಿ ಝೋನ್ ಸಮಿತಿಯ ಕಾರ್ಯದರ್ಶಿ ಶಂಸುದ್ದೀನ್ ಅಮ್ಜದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.