ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 46.86 ಲಕ್ಷ ರೂ ನಿವ್ವಳ ಲಾಭ

Aug 26, 2026 - 19:32
 0  42
ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 46.86 ಲಕ್ಷ ರೂ ನಿವ್ವಳ ಲಾಭ

ಮಡಿಕೇರಿ: 1973ರಲ್ಲಿ ಆರಂಭವಾದ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ರಲ್ಲಿ ರೂ.46.86 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಮಂದ್ರೀರ ಎನ್.ತೇಜಸ್ ತಿಳಿಸಿದರು.

1261 ಸದಸ್ಯರನ್ನು ಹೊಂದಿರುವ ಸಂಘದ ದುಡಿಯುವ ಬಂಡವಾಳ ರೂ.27.75 ಕೋಟಿ, ವಾರ್ಷಿಕ ವ್ಯವಹಾರ ರೂ.144.66 ಕೋಟಿ. ಈ ಸಾಲಿನಲ್ಲಿ ರೂ.23.02 ಕೋಟಿ ಸಾಲ ವಿತರಿಸಿ ಶೇ.99.40ರಷ್ಟು ವಸೂಲಿ ಮಾಡಲಾಗಿದೆ. ರೂ.16.39 ಕೋಟಿ ಠೇವಣಿ ಸಂಗ್ರಹವಾಗಿದೆ.

ರಸಗೊಬ್ಬರ, ಕೀಟನಾಶಕ ಮಾರಾಟದಿಂದ ರೂ.19.62 ಲಕ್ಷ ಲಾಭ ಬಂದಿದೆ. ರೈತರಿಗೆ ಮಣ್ಣು ಪರೀಕ್ಷಾ ಹಾಗೂ ಕಾಫಿ ಔಟರ್ನ್ ಯಂತ್ರ ಸೌಲಭ್ಯ ಕಲ್ಪಿಸಲಾಗಿದೆ. ಸದಸ್ಯರಿಗೆ ಶೇ.11.50 ಡಿವಿಡೆಂಡ್ ನೀಡಲಾಗುವುದು. ವಾರ್ಷಿಕ ಮಹಾಸಭೆ ಆ.29ರ ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಂಞೀರ.ಕೆ.ಉಮೇಶ್, ನಿದೇರ್ಶಕರಾದ ವಾಸಪ್ಪ, ಕಾವೇರಪ್ಪ, ಚಂಗಪ್ಪ, ತಿಮ್ಮಯ್ಯ, ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0