ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಂಸು ಕೋಡಿ ರವರಿಗೆ ಸನ್ಮಾನ
ಮಡಿಕೇರಿ:ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಹಂಸು ಕೋಡಿ ಅವರನ್ನು ನಾಪೋಕ್ಲು ಯುವ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಸದಸ್ಯರು ಸನ್ಮಾನಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಉಬೈದುಲ್ಲ ಎಂ. ಎ., ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಚೆರುಮಂದಂಡ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿರಾಜ್ ಪರವಂಡ, ವಿರಾಜಪೇಟೆ ವಿಧಾನಸಭಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿರೂಪ್ ತಿರೋಡಿರ ಹಾಗೂ ರಶೀದ್ ಚೆಟ್ಟಿಮಾನಿ, ರಮೀಜ್ ಕಾರೇಕಾಡ್, ಇರ್ಷಾದ್ ಕಾರೇಕಾಡ್ ಉಪಸ್ಥಿತರಿದ್ದರು.