Kodagu

ಹಾರಂಗಿ ಮತ್ತು ದುಬಾರೆ ಸಾಕಾನೆ ಶಿಬಿರ ಶೀಘ್ರದಲ್ಲೆ ಪ್ರವಾಸಿಗರಿಗೆ ಮುಕ್ತ

admincoorgdaily

ಹಾರಂಗಿ ಮತ್ತು ದುಬಾರೆ ಸಾಕಾನೆ ಶಿಬಿರ ಶೀಘ್ರದಲ್ಲೆ ಪ್ರವಾಸಿಗರಿಗೆ ಮುಕ್ತ

ಕುಶಾಲನಗರ, ಸೆ.2 : ಕುಶಾಲನಗರ ಸಮೀಪದ ಹಾರಂಗಿ ಸಾಕಾನೆ ಶಿಬಿರಕ್ಕೆ ಸಿಸಿಎಫ್ ಸೋನಲ್ ವೃಷ್ನಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಎಸ್. ಓ. ಪಿ. ಆದೇಶದ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾಮಗಾರಿ ಪರಿಶೀಲಿಸಿದರು.

ಕೆಲಸಮಯದ ಹಿಂದೆ ದುಬಾರೆ ಸಾಕಾನೆಯಿಂದ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ದುರ್ಘಟನೆಯಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕರ್ನಾಟಕದಾದ್ಯಂತವಿರುವ ಆನೆ ಶಿಬಿರಗಳಲ್ಲಿ ಪ್ರವಾಸಿಗರಿಗೆ ಮುಕ್ತಾವಕಾಶ ನಿರ್ಬಂಧಿಸಿ ಎಸ್. ಓ. ಪಿ. ಜಾರಿಗೆ ತಂದಿತ್ತು. ಅದರನ್ವಯ ನಡೆದ ಕಾಮಗಾರಿಯು ಮುಂದಿನ ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಪ್ರವಾಸಿಗರಿಗೆ ಹಾರಂಗಿ ಸಾಕಾನೆ ಶಿಬಿರ ಮುಕ್ತವಾಗಲಿದೆ.

 ಇದರಂತೆ ದುಬಾರೆ ಸಾಕಾನೆ ಶಿಬಿರವೂ ಶೀಘ್ರದಲ್ಲೇ ಮುಕ್ತವಾಗಲಿದೆ ಎಂದು ತಿಳಿದು ಬಂದಿದೆ. ಭೇಟಿಯ ಸಂದರ್ಭ ಡಿ.ಎಫ್.ಓ. ಅಭಿಷೇಕ್, ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್, ಉಪವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.