ಹಾಸನಾಂಬ ಜಾತ್ರಾ ಮಹೋತ್ಸವ:ಶನಿವಾರ ಒಂದೇ ಟಿಕಟ್ ಮಾರಾಟದಿಂದ ಬಂದ ಆದಾಯ ಕೇಳಿದ್ರೆ ನೀವೇ ಶಾಕ್!!!

Oct 11, 2025 - 21:17
 0  815
ಹಾಸನಾಂಬ ಜಾತ್ರಾ ಮಹೋತ್ಸವ:ಶನಿವಾರ ಒಂದೇ ಟಿಕಟ್ ಮಾರಾಟದಿಂದ ಬಂದ ಆದಾಯ ಕೇಳಿದ್ರೆ ನೀವೇ ಶಾಕ್!!!
Photo credit: news18

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ಜಾತ್ರಾ ಮಹೋತ್ಸವ ಶುರುವಾಗಿದ್ದು ಶನಿವಾರ ಒಂದೇ ದಿನ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದುಬಂದಿದೆ. ವಾರಾಂತ್ಯದ ಹಿನ್ನಲೆ ಟಿಕೆಟ್‌ ಮಾರಾಟದಿಂದ ದಾಖಲೆ ಆದಾಯ ಸಂಗ್ರಹವಾಗಿದೆ. ಒಂದು ಸಾವಿರ ರೂ. ಮೌಲ್ಯದ ಟಿಕೆಟ್‌ ಮಾರಾಟದಿಂದ 65 ಲಕ್ಷ ರೂ., 300 ರೂ. ಮೌಲ್ಯದ ಟಿಕೆಟ್‌ ಮಾರಾಟದಿಂದ 35 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿ, ಆರಂಭದ ದಿನಗಳಲ್ಲೇ ಹಾಸನಾಂಬೆ ದರ್ಶನದಲ್ಲಿ ದಾಖಲೆ ಆದಾಯ ಸಂಗ್ರಹವಾಗುತ್ತಿದೆ. ಶನಿವಾರ ಒಂದೇ ದಿನ 1000 ರೂ. ಹಾಗು 300ರೂ. ಟಿಕೆಟ್‌ ಮಾರಾಟದಿಂದ 1 ಕೋಟಿರೂ. ಸಂಗ್ರಹವಾಗಿದೆ. ಶುಕ್ರವಾರ 67 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಕಳೆದ ವರ್ಷ 12 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷ 15 ಕೋಟಿಗೂ ಹೆಚ್ಚು ಆದಾಯ ಸಂಗ್ರಹ ನಿರೀಕ್ಷೆ ಇದೆ. ಯಾವುದೇ ಗೊಂದಲವಿಲ್ಲದೆ ದರ್ಶನ ಚೆನ್ನಾಗಿ ನಡೀತಿದೆ. ಪ್ರತಿದಿನ ಕನಿಷ್ಠ 2 ಲಕ್ಷ ಭಕ್ತರು ಬರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 2