ಹಾತೂರು: ಮಳೆಗೆ ರಸ್ತೆ ಸಂಪೂರ್ಣ ಕುಸಿತ

Jul 7, 2026 - 12:07
Jul 7, 2026 - 13:33
 0  907
ಹಾತೂರು: ಮಳೆಗೆ ರಸ್ತೆ ಸಂಪೂರ್ಣ  ಕುಸಿತ

ಗೋಣಿಕೊಪ್ಪ: ಹಾತೂರು  ವ್ಯಾಪ್ತಿಯ ಕೊಳ್ತೋಡು ಬೈಗೋಡು, ಮುಕ್ಕಾಟೀರ ಚಿಣ್ಣಮ್ಮ ಮತ್ತು ಮುಕ್ಕಾಟೀರ ನಂಜಪ್ಪ ಅವರ ಮನೆಗೆ ಹೋಗುವ ರಸ್ತೆ ಮಳೆಯಿಂದಾಗಿ ಸಂಪೂರ್ಣ ಕುಸಿದು ಬಿದ್ದಿದೆ. ರಸ್ತೆಯ ಮಧ್ಯದಲ್ಲಿ ಆಳವಾದ ಬಿರುಕು ಮತ್ತು ಗುಂಡಿ ಬಿದ್ದಿದೆ.

ಒಂದು ಬದಿ ಸಂಪೂರ್ಣ ಕುಸಿದಿದ್ದು, ಯಾವುದೇ ವಾಹನ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಮಳೆಗಾಲದ ಆರಂಭದಲ್ಲೇ ಈ ಸ್ಥಿತಿ ಇದ್ದರೆ ಮುಂದಿನ ದಿನಗಳಲ್ಲಿ ಇದು ಅತ್ಯಂತ ಆತಂಕಕಾರಿಯಾಗಲಿದೆ. ಈ ರಸ್ತೆಯೇ ಅಲ್ಲಿನ ಜನರ ಏಕೈಕ ಸಂಪರ್ಕ ಮಾರ್ಗವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ರಸ್ತೆಯನ್ನು ತುರ್ತಾಗಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0