ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ; ಸಾಮಾಜಿಕ ಜಾಲತಾಣಗಳಲ್ಲಿನ ಆರೋಗ್ಯ ಮಾಹಿತಿ ನಂಬಲಹ೯ವಲ್ಲ - ಡಾ. ರಾಜಶ್ರೀ
admincoorgdaily

ಮಡಿಕೇರಿ ಮೇ 28 - ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯ ಸಂರಕ್ಷಣೆಯ ಪ್ರಚಾರದ ಮೂಲಕ ಮಾರುಕಟ್ಟೆ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಎಲ್ಲಾ ರೀತಿಯ ಪ್ರಚಾರವನ್ನೂ ನಂಬುವ ಬದಲಿಗೆ ಸೂಕ್ತ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕೆಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ವೈದ್ಮೆ ಡಾ ಕೆ.ಟಿ.ರಾಜಶ್ರೀ ಸಲಹೆ ನೀಡಿದ್ದಾರೆ.
ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಆರೋಗ್ಯ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ರಾಜಶ್ರೀ, ಹಿಂದಿನ ಕಾಲದಲ್ಲಿ ನೀಡಲಾಗುತ್ತಿದ್ದ ಚಿಕಿತ್ಸೆ ಮತ್ತು ಹಳೇ ಆರೋಗ್ಯ ಪದ್ದತಿಯನ್ನೇ ನಂಬಿಕೊಂಡಿರಬಾರದು. ಆರೋಗ್ಯ ಪದ್ದತಿ ಕೂಡ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ ಎಂದರು.
ಇಂದಿನ ನವ ತಂತ್ರಜ್ಞಾನದ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯ ಚಿಕಿತ್ಸೆ ಸಂಬಂಧಿತ ಪ್ರಚಾರ ನಡೆಯುತ್ತಿದೆ ಆದರೆ ಇಂಥ ಪ್ರಚಾರವನ್ನು ನಂಬುವ ಬದಲಿಗೆ ಸೂಕ್ತ ವೈದ್ಯರನ್ನು ಮುಖತ ಭೇಟಿಯಾಗಿ ಚಿಕತ್ಸೆ ಪಡೆಯುವುದು ಅಗತ್ಯ ಎಂದೂ ಅವರು ಹೇಳಿದರು.
ರೋಟರಿ ಜಿಲ್ಲೆ 3181 ನ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರೋಟರಿ ಸಂಸ್ಥೆಯಿಂದ ಶ್ರವಣ ಸಮಸ್ಯೆಯಿರುವವರಿಗೆ ದಿ ಗಿಪ್ಠ್ ಆಫ್ ಸೌಂಡ್ ಎಂಬ .ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಶ್ರವ್ಯ ಸಲಕರಣೆಯನ್ನು ದಾನಿಗಳ ಸಹಾಯದಿಂದ ನೀಡಲಾಗುತ್ತದೆ.
ಅಂತೆಯೇ, ದೇಶದಲ್ಲಿ ಹೆಚ್ಚುಗಾುತ್ತಿರುವ ಮಕ್ಕಳಲ್ಲಿನ ಹೖದ್ಗೋಗ ಸಮಸ್ಯೆಯನ್ನು ಗಮನದಲ್ಲಿರಿಸಿಕೊಂಡು ಟಚ್ಚಿಂಗ್ ದಿ ಲಿಟಲ್ ಹಾಟ್ಸ್೯ ಎಂಬ ಯೋಜನೆ ಜಾರಿಗೊಳ್ಳಲಿದೆ. ಅಗತ್ಯವುಳ್ಳ ಮಕ್ಕಳಿಗೆ ರೋಟರಿ ವತಿಯಿಂದ ಉಚಿತವಾಗಿ ಹೖದ್ರೋಗ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತದೆ ಎಂದರು.
ರೋಟರಿ ಸಂಸ್ಥೆಯ ಪ್ರಯತ್ನದಿಂದಾಗಿಯೇ ಜಾಗತಿಕವಾಗಿ ಪೋಲಿಯೋ ನಿಮೂ೯ಲನೆ ಸಾಧ್ಯವಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಪೋಲಿಯೋದ 1 ಪ್ರಕರಣ ಹೊರತುಪಡಿಸಿದಂತೆ ಪ್ರಪಂಚ ಪೋಲಿಯೋ ಮುಕ್ತವಾಗಿದೆ ಎಂದೂ ಅನಿಲ್ ಹೇಳಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಪ್ರತೀ ವಷ೯ ರೋಟರಿ ಹಿಲ್ಸ್ ವತಿಯಿಂದ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗುತ್ತಿದ್ದು,, ಈ ಬಾರಿಯೂ ಮಡಿಕೇರಿ, ರೋಟರಿ ವುಡ್ಸ್ ಮತ್ತು ಇನ್ನರ್ ವೀಲ್ ಸಂಸ್ತೆಗಳ ಸದಸ್ಯರು ಮತ್ತು ಕುಟುಂಬ ವಗ೯ದವರಿಗೆ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ವಂದಿಸಿದ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಅಧ್ಯಕ್ಷ ಪಿ.ಆರ್.ರಾಜೇಶ್, ಕಾಯ೯ದಶಿ೯ ಡಾ.ಚೇತನ್ ಶೆಟ್ಟಿ ಇನ್ನರ್ ವೀಲ್ ಸಂಸ್ಥೆಯ ಕಾಯ೯ದಶಿ೯ ನಮಿತಾರೈ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಕಾಯ೯ದಸಿ೯ ಪ್ರಮೀಳಾ ಶೆಟ್ಟಿ ಹಾಜರಿದ್ದರು.
ತಜ್ಞ ವೈದ್ಯರಾದ ಡಾ. ಸಿ.ಆರ್. ಪ್ರಶಾಂತ್, ಡಾ.ರಾಜೇಶ್ವರಿ, ಡಾ. ಚಂದ್ರಶೇಖರ್, ಡಾ. ರಾಕೇಶ್, ಡಾ.ಶುಭಾ ಕೆ.ಜಿ. ಎಸ್.ಎಂ., ಚೇತನ್, ಡಾ.ರಾಜಶ್ರೀ ಡಾ. ನವೀನ್, ಡಾ.ಜಿಶ್ಮಾ ತಪಾಸಣೆ ಕೈಗೊಂಡರು.