ವಿಕಾಸ್ ಜನಸೇವಾ ಕೇಂದ್ರದಲ್ಲಿ ಮಿಸ್ಟಿ ಹಿಲ್ಸ್ ನಿಂದ ಆರೋಗ್ಯ ತಪಾಸಣೆ
admincoorgdaily
ಮಡಿಕೇರಿ:ನಗರದ ವಿಕಾಸ್ ಜನಸೇವಾ ಕೇಂದ್ರದಲ್ಲಿರುವ 34 ಆಶ್ರಿತರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇತ್ರ ಉಚಿತ ತಪಾಸಣೆ ಮತ್ತು ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿತ್ತು. ನೇತ್ರ ತಜ್ಞರಾದ ಡಾ. ಎಸ್.ಎಂ.ಚೇತನ್, ಡಾ. ಸಿ.ಆರ್.ಪ್ರಶಾಂತ್ ನೇತ್ರ ತಪಾಸಣೆ, ಚಿಕಿತ್ಸೆ ನೀಡಿದರೆ, , ಜಿಲ್ಲಾ ಸಕಾ೯ರಿ ಆಸ್ಪತ್ರೆಯ ವೈದ್ಯರಾದ ಡಾ. ಚೇತನ್ ಮತ್ತು ಡಾ ಸುಹಾಸ್ ಆರೋಗ್ಯ ತಪಾಸಣೆ, ಚಿಕಿತ್ಸೆ ಕೈಗೊಂಡರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ನಿದೇ೯ಶಕರಾದ ಜಗದೀಶ್ ಪ್ರಶಾಂತ್, ಪ್ರಮೋದ್ ರೈ ಪ್ರಕಾಶ್ ಪೂವಯ್ಯ, ಪ್ರಸಾದ್ ಗೌಡ, ತಾನ್ಯ ಶಿಬಿರ ನಿವ೯ಹಿಸಿದರು.