ಸುಂದರನಗರದಲ್ಲಿ ಆರೋಗ್ಯ ತಪಾಸಣೆ
ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರ ಅಂಗನವಾಡಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನಡೆಸಲಾದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ನಡೆಸಲಾಯಿತು.
ತಪಾಸಣೆಯಲ್ಲಿ ಸುಂದರನಗರ, ವಿನಾಯಕ ಬಡಾವಣೆ, ಬಸವೇಶ್ವರ ಬಡಾವಣೆ ಹಾಗೂ ನವಗ್ರಾಮದ ಗ್ರಾಮಸ್ಥರು ಇದರ ಉಪಯೋಗವನ್ನು ಪಡೆದುಕೊಂಡರು. ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಅಂಗನವಾಡಿ ಶಿಕ್ಷಕಿ ಬೋಜಮ್ಮ, ಸಮುದಾಯ ಆರೋಗ್ಯಾಧಿಕಾರಿ ಸೌಮ್ಯ, ಆಶಾ ಕಾರ್ಯಕರ್ತರಾದ ಸುಮಿತ್ರ, ನಾಗರತ್ನ, ಅಂಗನವಾಡಿ ಸಹಾಯಕಿ ಜಯ ಹಾಗೂ ಇನ್ನಿತರರು ಇದ್ದರು.
