ಭಾರೀ ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು:ನದಿಗೆ ನೀರು ಬಿಡುಗಡೆ

ಭಾರೀ ಮಳೆಯಿಂದಾಗಿ ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು:ನದಿಗೆ ನೀರು ಬಿಡುಗಡೆ

ಕುಶಾಲನಗರ, ಅ 23: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. 8220 ಕ್ಯೂಸೆಕ್ ಒಳಹರಿವಿದ್ದು ನದಿಗೆ 5000 ಕ್ಯೂಸೆಕ್ ಪ್ರಮಾಣದ ನೀರು ಕ್ರೆಸ್ಟ್ ಗೇಟ್ ಗಳ ಮೂಲಕ ಹರಿಬಿಡಲಾಗುತ್ತಿದೆ.ಇದೇ ಪ್ರಥಮ ಬಾರಿಗೆ ಎಂಬಂತೆ ಅಕ್ಟೋಬರ್ ತಿಂಗಳಲ್ಲಿ ಕೂಡ‌ ಮಳೆಯಿಂದ ಅಣೆಕಟ್ಟೆ ಭರ್ತಿಯಾಗಿದೆ.