ಹೆಬ್ಬಾಲೆ : ಕೊಡಗು ಜಿಲ್ಲಾ ಯುವ‌ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಹೆಚ್.ಜೆ. ತ್ರಿನೇಶ್ ಗೆ ಗ್ರಾಮಸ್ಥರಿಂದ ಸನ್ಮಾನ

Aug 13, 2026 - 17:16
 0  77
ಹೆಬ್ಬಾಲೆ : ಕೊಡಗು ಜಿಲ್ಲಾ ಯುವ‌ ಕಾಂಗ್ರೆಸ್ ನೂತನ ಉಪಾಧ್ಯಕ್ಷ ಹೆಚ್.ಜೆ. ತ್ರಿನೇಶ್ ಗೆ ಗ್ರಾಮಸ್ಥರಿಂದ ಸನ್ಮಾನ

ಕುಶಾಲನಗರ : ಕೊಡಗು ಜಿಲ್ಲಾ ಯುವ‌ ಕಾಂಗ್ರೆಸ್ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಜೆ.ತ್ರಿನೇಶ್ ಗೆ ಹೆಬ್ಬಾಲೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಹೆಬ್ಬಾಲೆ ವಲಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಜಂಟಿಯಾಗಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೆಬ್ಬಾಲೆ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಜಿ.ಲೋಕೇಶ್ ಅವರು ನೂತನ ಉಪಾಧ್ಯಕ್ಷ ತ್ರಿನೇಶ್ ಅವರಿಗೆ ಶಾಲು ಹೊಂದಿಸಿ ಪೇಟ ತೊಡಿಸಿ ಪುಷ್ಪಹಾರ ಹಾಕಿ ಅಭಿನಂದಿಸಿದರು.

ಈ ಸಂದರ್ಭ ಟಿ.ಜಿ.ಲೋಕೇಶ್ ಮಾತನಾಡಿ, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ತ್ರಿನೇಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿದುವ ಮೂಲಕ ಸ್ಥಳೀಯ ಚುನಾವಣೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಕೆ.ಸೂರಜ್ ಮಾತನಾಡಿ, ಯುವ ಕಾಂಗ್ರೆಸ್ ಸಮಿತಿ ಉತ್ತಮ ಸಂಘಟಕ ತ್ರಿನೇಶ್ ಆಯ್ಕೆ ಮಾಡಿರುವುದು ಸ್ವಾಗತಾರ್ಹ.ಇವರ ನೇತೃತ್ವದಲ್ಲಿ ಯುವ ಜನಾಂಗವನ್ನು ಸಂಘಟಿಸಿ ಪಕ್ಷದ ಬೆಳೆವಣಿಗೆಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ‌.ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಪಾಲ್ಗೊಂಡಿದ್ದರು

ಸನ್ಮಾನ ಸ್ಚೀಕಾರಿಸಿ ಮಾತನಾಡಿದ ನೂತನ ಯುವ ಕಾಂಗ್ರೆಸ್ ಉಪಾಧ್ಯಕ್ಷ ತ್ರಿನೇಶ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮಣ್ಣ ಹಾಗೂ ನಾಯಕರಾದ ನಾಪಂಡ ಮುತ್ತಪ್ಪ,ಮುದ್ದಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ಮುಂದಿನ ದಿನಗಳಲ್ಲಿ ಪಕ್ಷಕ್ಕೆ ನಿಷ್ಠೆ ಹಾಗೂ ಪ್ರಾಮಾಣಿಕ ದುಡಿದು ಪಕ್ಷವನ್ನು ಸಂಘಟಿಸುವ ಮೂಲಕ ಸ್ಥಳೀಯ ಹಾಗೂ ಎಂಎಲ್ಎ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭ ತೊರೆನೂರು ಬಸವೇಶ್ವರ ದೇವಾಲಯ ಸಮಿತಿ ಕಾರ್ಯಾಧ್ಯಕ್ಷ ಟಿ.ಜಿ.ಶಿವಣ್ಣ ವಕೀಲರಾದ ಎಚ್.ಟಿ.ನಿರಂಜನ್,ಎಚ್.ಜೆ.ಗಿರೀಶ್,

ಉದ್ಯಮಿ ಕೆ.ಎಸ್.ರವಿಕೂಡಿಗೆ, ಗ್ರಾಮಸ್ಥರಾದ ಎಚ್.ಎಂ.ವಿಶ್ವನಾಥ್,ಎಚ್.ಕೆ.ಸುಬಾಷ್, ಅರುಣ್ ,ಹೆಚ್.ಬಿ.ತ್ರಿನೇಶ್ ಶಿವರಾಂ.ರಘು ಮತ್ತಿತರರು ಪಾಲ್ಗೊಂಡಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0