Kodagu

ಹಿಂದೂ ಜಾಗರಣ ವೇದಿಕೆಯಿಂದ ಆಗಸ್ಟ್ 07ರಿಂದ 14ರವರೆಗೆ ಅಖಂಡ ಭಾರತ ಸಂಕಲ್ಪ ದಿನಾಚರಣೆ

admincoorgdaily

ಹಿಂದೂ ಜಾಗರಣ ವೇದಿಕೆಯಿಂದ ಆಗಸ್ಟ್ 07ರಿಂದ 14ರವರೆಗೆ ಅಖಂಡ ಭಾರತ ಸಂಕಲ್ಪ ದಿನಾಚರಣೆ

ಮಡಿಕೇರಿ: ಯುವ ಪೀಳಿಗೆಯಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲೆಯ ೬ ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಆಯೋಜಿಸಿದೆ ಎಂದು ಜಿಲ್ಲಾ ಸಂಯೋಜಕ ಬೋಜೇಗೌಡ ಹೇಳಿದರು.

ಆ.೭ರಿಂದ ೧೪ರವರೆಗೆ ಮಡಿಕೇರಿ, ಮದಾಪುರ, ಕೊಡ್ಲಿಪೇಟೆ, ಪೊನ್ನಂಪೇಟೆ, ವಿರಾಜಪೇಟೆ ಮತ್ತು ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ಹಾಗೂ ಸಭೆ ನಡೆಯಲಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವಕರಿಗೆ ತಿಳಿಸುವುದೇ ಕಾರ್ಯಕ್ರಮದ ಮುಖ್ಯ ಗುರಿ ಎಂದರು.

 ಆ.೭ ಮಡಿಕೇರಿಯಲ್ಲಿ ಕುಂದುರುಮೊಟ್ಟೆ ದೇವಾಲಯದಿಂದ ಮೆರವಣಿಗೆ ಆರಂಭವಾಗಿ ಕಾವೇರಿ ಹಾಲ್‌ನಲ್ಲಿ ಸಭೆ ನಡೆಯಲಿದೆ. ಆ.೧೦ ಪೊನ್ನಂಪೇಟೆಯಲ್ಲಿ ೧೦ ಕಿ.ಮೀ ವಾಹನ ಜಾಥ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ದೇಶಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಮುಖರಾದ ಎ.ಶರತ್, ಬಾಲಕೃಷ್ಣ ರೈ, ಎಲ್.ಹರೀಶ್, ಎಸ್.ತಿಮ್ಮಯ್ಯ, ಸಜೀವ್, ಇದ್ದರು.