ಹಾಕಿ ಎಂದರೆ ಕೊಡಗು, ಕೊಡಗು ಎಂದರೆ ಹಾಕಿ:ಶಾಸಕ ಎಎಸ್ ಪೊನ್ನಣ್ಣ

Dec 21, 2025 - 14:26
 0  334
ಹಾಕಿ ಎಂದರೆ ಕೊಡಗು, ಕೊಡಗು ಎಂದರೆ ಹಾಕಿ:ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ:ತಾಲೂಕಿನ ವಿ ಬಾಡಗ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ, 4ನೇ ಕೊಡವ ಕುಟುಂಬ ಹಾಕಿ ಪಂದ್ಯಾವಳಿ ಹೈ ಫ್ಲೈಯರ್ಸ್ ಕಪ್ 2025 ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿ ಎಲ್ಲಾ ತಂಡಗಳಿಗೆ ಶುಭ ಕೋರಿದರು. 

    ಬಳಿಕ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಹಾಕಿ ಎಂದರೆ ಕೊಡಗು, ಕೊಡಗು ಎಂದರೆ ಹಾಕಿ ಎಂಬಂತಹ ಮಾತು ಜನಸಾಮಾನ್ಯರ ಮನದಲ್ಲಿ ಇದೆ. ಇದು ನಮ್ಮ ಜಿಲ್ಲೆಗೆ ಹಾಗೂ ಈ ಕ್ರೀಡೆಯನ್ನು ಉಸಿರಾಗಿ ತಕ್ಕೊಂಡಿರುವ ನಮ್ಮ ಸಮುದಾಯಕ್ಕೆ ಹೆಮ್ಮೆಯ ವಿಷಯ. ಇದನ್ನು ಪೋಷಿಸಿ ಬೆಳೆಸಿಕೊಂಡು ನಮ್ಮ ಯುವ ಪೀಳಿಗೆಯೂ ಸಹ ಇಂತಹ ಪಂದ್ಯಾಟದಲ್ಲಿ ಭಾಗವಹಿಸುವಂಥಾಗಲು ಈ ಕ್ರೀಡಾಕೂಟ ಎಲ್ಲರಿಗೂ ನಾಂದಿಯಾಗಲಿ ಎಂದು ಇಚ್ಚಿಸಿದರು.

 ಎಲ್ಲಾ ತಂಡಗಳಿಗೆ ಶುಭ ಕೋರಿದ ಮಾನ್ಯ ಶಾಸಕರು ಗೆಲುವು ಸೋಲನ್ನು ಎಲ್ಲರೂ ಸಮಾನವಾಗಿ ತೆಗೆದುಕೊಂಡಲ್ಲಿ ಕ್ರೀಡೆಯ ನಿಜವಾದ ಸ್ವಾದ ನಾಡಿಗೆ ಪರಿಚಯಿಸಿದಂತಾಗುತ್ತದೆ ಎಂದು ಬಣ್ಣಿಸಿದರು. 

ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು, ಪ್ರಮುಖರಾದ ಕೊಲ್ಲಿರ ಬೋಪಣ್ಣ, ಗಿಣಿ ಮೊಣಪ್ಪ, ಪೂವಣ್ಣ, ಅಧ್ಯಕ್ಷರು ಗಿರೀಶ್ ಮುದ್ದಯ್ಯ, ರಂಜಿ, ವಿಕ್ರಂತ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0