ಮಾನವ-ಪ್ರಾಣಿ ಸಂಘರ್ಷ:ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಿದ ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ: ಮಾನವ ಪ್ರಾಣಿ ಸಂಘರ್ಷ ಹಾಗೂ ಜಮ್ಮಾಮಲೆ ಸಮಸ್ಯೆ ಕುರಿತು ಇಂದು ಅರಣ್ಯ ಸಚಿವರಾದ ರಾಮಲಿಂಗ ರೆಡ್ಡಿ ಅವರೊಂದಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ವಿಸ್ಕೃತವಾಗಿ ಚರ್ಚಿಸಿದರು.
ಕ್ಷೇತ್ರದಲ್ಲಿ ಹಾಗೂ ಕೊಡಗಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಚಿತ್ರಣವನ್ನು ಮಾನ್ಯ ಸಚಿವರಿಗೆ ವಿವರಿಸಿ ಪರಿಹಾರ ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾನ್ಯ ಸಚಿವರು ಸದನ ಕಲಾಪ ಮುಗಿದ ಕೂಡಲೇ ಕೊಡಗಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆಯುವುದಾಗಿ ಭರವಸೆ ನೀಡಿದರು. ಬಹುತೇಕ ಇದೇ ತಿಂಗಳ 28ಕ್ಕೆ ಅರಣ್ಯ ಸಚಿವರು ಜಿಲ್ಲೆಗೆ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಜಮ್ಮಾಮಲೆ ಅಧ್ಯಕ್ಷರಾದ ಪೆಮ್ಮಯ್ಯ, ನಿರ್ದೇಶಕರುಗಳಾದ ಚಿನ್ನಪ್ಪ, ಪೂವಯ್ಯ, ಸೋಮಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
