ಪತ್ನಿಯ ವಿಕೃತ ಲೈಂಗಿಕ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

Mar 30, 2026 - 11:36
 0  2.9k
ಪತ್ನಿಯ ವಿಕೃತ ಲೈಂಗಿಕ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ
ಪ್ರಾತಿನಿಧಿಕ ಚಿತ್ರ

ಬೆಂಗಳೂರು, (ಮಾರ್ಚ್ 29): ಪತ್ನಿಯ (Wife) ಲೈಂಗಿಕ ವಿಕೃತಿ ಮತ್ತು ನಿರಂತರ ಕಿರುಕುಳ ತಾಳಲಾರದೆ ಪತಿಯೊಬ್ಬರು (Husband) ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬೆಳಕಿಗೆ ಬಂದಿದೆ. ಪತ್ನಿಯ ಮಾನಸಿಕ ಹಿಂಸೆ, ಲೈಂಗಿಕ ದೌರ್ಜನ್ಯ ತಾಳಲಾರದೇ ಪತಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪತ್ನಿಯ ವಿಪರೀತ ವಿಕೃತ ಲೈಂಗಿಕ ಬೇಡಿಕೆಗೆ ಬೇಸತ್ತಿರುವ ಪತಿ, ಆಕೆಯ ವಿಕೃತ ಕಾಮದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಾನು ಮಾತ್ರವಲ್ಲದೆ, ತನ್ನ ಸ್ನೇಹಿತೆಯ ಜೊತೆಯೂ ದೈಹಿಕ ಸಂಬಂಧ ಹೊಂದುವಂತೆ ಪತ್ನಿ ಒತ್ತಾಯಿಸುತ್ತಿದ್ದಾಳೆಂದು ದೂರಿನಲ್ಲಿ ವಿವರಿಸಿದ್ದಾರೆ.

ನನ್ನ ಪತ್ನಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿ ವಿಕೃತವಾಗಿ ವರ್ತಿಸುತ್ತಾಳೆ. ಸ್ನೇಹಿತೆಯರ ಜೊತೆ ಸ್ವೀಟ್ ಮೆಮೋರಿ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾಳೆ. ಅಲ್ಲದೇ ಮದುವೆಗೂ ಮುನ್ನ ಆಕೆಯ ಸಂಬಂಧಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡುತ್ತಾಳೆ.ಅಷ್ಟೇ ಅಲ್ಲ ಕುಡಿದು ಬರುವುದು, ಸ್ನೇಹಿತರ ಜೊತೆ ಅಲೆದಾಡುವುದು ಇಂದಿನ ಕಾಲದಲ್ಲಿ ಕಾಮನ್ ಎಂದು ಹೇಳಿ ವಿಕೃತವಾಗಿ ವರ್ತಿಸುತ್ತಾಳೆ. ವಿಕೃತ ದೈಹಿಕ ಸಂಪರ್ಕಕ್ಕೆ ಒಪ್ಪದೇ ಇದ್ದಾಗ ಕಿರುಕುಳ ನೀಡುತ್ತಾಳೆ ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾನೆ.

ಇನ್ನು ಪತ್ನಿಯ ಈ ಅಸಲಿ ಮುಖ ತಿಳಿಯುವ ಮುನ್ನವೇ ಆಕೆಗೆ ಒಡವೆಗಳನ್ನು ಕೊಟ್ಟಿದ್ದೇನೆ. ಆ ಒಡವೆಗಳನ್ನೂ ವಾಪಸ್ ನೀಡದೆ ಸತಾಯಿಸುತ್ತಿದ್ದಾಳೆ ಎಂದು ನೊಂದ ಪತಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 2
Love Love 0
Funny Funny 5
Angry Angry 4
Sad Sad 0
Wow Wow 1