ನನಗೂ ಬೇಸರ ಇದೆ,ಡೆಪ್ಯೂಟಿ ಸ್ಪೀಕರ್ ಜವಬ್ದಾರಿ ನಿಭಾಯಿಸುತ್ತೇನೆ:ಶಾಸಕ ಎಎಸ್ ಪೊನ್ನಣ್ಣ
ಬೆಂಗಳೂರು:ಸಚಿವ ಸ್ಥಾನ ಕೈ ತಪ್ಪಿದೆ,ನನಗೂ ಬೇಸರ ಇದೆ,ಸ್ಪೀಕರ್ ಜವಬ್ದಾರಿ ನಿಭಾಯಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಮ್ಮ ಮನಸ್ಸಿನಲ್ಲಿ ಹಲವು ಲೆಕ್ಕಾಚಾರಗಳು ಇರುತ್ತೆ.ನಾನು ಕೂಡ ಹಲವು ಲೆಕ್ಕಾಚಾರ ಮಾಡಿದ್ದೆ.ಕೊಡಗಿಗೆ ಕೊಟ್ಟಿಲ್ಲ,ಕೊಡವ ಜನಾಂಗಕ್ಕೆ ಕೊಟ್ಟಿಲ್ಲ.25 ವರ್ಷದಿಂದ ಕೊಡಗಿಗೆ ಪ್ರಾತಿನಿತ್ಯ ಸಿಕ್ಕಿಲ್ಲ.ನಾವು ಪ್ರತ್ಯೇಕ ರಾಜ್ಯವಾಗಿತ್ತು.ವಿಶೇಷ ಸಮುದಾಯದ ಯಾಕೆ ಗುರುತಿಸಲ್ಲ ಎಂದು ನಾವು ಲೆಕ್ಕಾಚಾರ ಹಾಕಬಹುದು.ಆದರೆ ರಾಜಕೀಯ ಲೆಕ್ಕಾಚಾರಗಳು ನಮ್ಮ ಮನಸ್ಸಿನಲ್ಲಿ ಇರುವಂತೆ ನಡೆಯಲ್ಲ.ಪಕ್ಷಕ್ಕೆ ತನ್ನದೇ ಆದ ವ್ಯವಸ್ಥೆ,ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಒತ್ತಿ ಹಿಡಿದು ನನಗೆ ಮಂತ್ರಿ ಮಾಡುತ್ತಾರೆ ಎಂದು ನಾನು ಭಾವಿಸಿದ್ದೆ.ಅವರು ಖಂಡಿತವಾಗಿಯೂ ಅವರ ಪ್ರಯತ್ನ ಮಾಡಿದ್ದಾರೆ.ಆದರೆ ಅವರು ಹೇಳಿದ ತಕ್ಷಣ ಹಾಕಬೇಕೆಂದಿಲ್ಲ.ನಿರೀಕ್ಷೆ ಪ್ರಕಾರ ಆಗದಿದ್ದಾಗ ಬೇಸರ ಆಗುವುದು ಸಹಜ.ನನಗೂ ಬೇಸರ ಆಗಿದೆ.ಆಗಿಲ್ಲ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಅದನ್ನೆಲ್ಲಾ ಜೀರ್ಣಿಸಿಕೊಂಡು ನುಂಗಿ,ಪಕ್ಷವನ್ನು ಇನ್ನಷ್ಟು ಬಲವಾಗಿ ಕಟ್ಟಿ 2028ರಲ್ಲಿ ಮತ್ತೆ ಸರ್ಕಾರ ಬರುವಂತೆ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕತ್ವ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಎಎಸ್ ಪೊನ್ನಣ್ಣ ಹೇಳಿದರು.
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
