IPL 2026 🏏

IPL 2026;15 ವರ್ಷಗಳ ಬಳಿಕ ಐಪಿಎಲ್ ಮೊದಲ ಪಂದ್ಯದಲ್ಲಿ ಗೆಲವು ಸಾಧಿಸಿದ ಮುಂಬೈ ಇಂಡಿಯನ್ಸ್

admincoorgdaily

Photo credit:PTI(,ರೋಹಿತ್ ಶರ್ಮಾ &ರಿಕೆಲ್ಟನ್)

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು ರೋಚಕ ಜಯ ಗಳಿಸಿದೆ.

ಕೋಲ್ಕತ್ತ ನೈಟ್ ರೈಡರ್ಸ್ ತಂಡವು ನೀಡಿದ 221 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 4 ವಿಕೆಟ್ ನಷ್ಟಕ್ಕೆ ಇನ್ನೂ 5 ಬೌಲ್ ಬಾಕಿಯಿರುವಂತೆ 224 ರನ್ ಗಳಿಸಿ, ಈ ಆವೃತ್ತಿಯ ಮೊದಲ ಜಯ ತನ್ನದಾಗಿಸಿಕೊಂಡಿತು. ರೋಹಿತ್ ಶರ್ಮ ಅದ್ಭುತ ಇನ್ನಿಂಗ್ಸ್ ಮೂಲಕ ತಾವು ಟಿ20 ಗೆ ಫಿಟ್ ಎಂದು ಸಂದೇಶ ಸಾರಿದರು.

38 ಎಸೆತಗಳಲ್ಲಿ 6 ಸಿಕ್ಸರ್ 6 ಬೌಂಡರಿ ಬಾರಿಸಿದ ಅವರು 78 ರನ್ ಗಳ ಮಹತ್ವದ ಕೊಡುಗೆ ನೀಡಿದರು. ಆ ಮೂಲಕ ಐಪಿಎಲ್‌ ಮತ್ತೇರಿಸಿದರು. ರಯಾನ್ ರಿಕೆಲ್ಸನ್ ಅವರು 43 ಎಸೆತಗಳಲ್ಲಿ ಗಳಿಸಿದ 81 ರನ್ ಗಳ ಕೊಡುಗೆಯೂ ಮುಂಬೈ ರನ್ ರೇಟ್ ಹೆಚ್ಚಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ನಾಯಕ ಅಜಿಂಕ್ಯ ರಹಾನೆ ಮತ್ತು ಅಂಗ್‌ ಕ್ರಿಶ್ ರಘುವಂಶಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ KKR 220 ರನ್ ಗಳಿಸಿತು.