IPL 2026 🏏

IPL 2026;ಈ ಸಲವೂ ಕಪ್ RCB ಮಡಿಲಿಗೆ

admincoorgdaily

IPL 2026;ಈ ಸಲವೂ ಕಪ್  RCB ಮಡಿಲಿಗೆ

ಅಹಮದಾಬಾದ್: ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026ರ ಫೈನಲ್ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ.

ಗುರಿ ಬೆನ್ನಟ್ಟಿದ RCBಗೆ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದರು. ಆಕ್ರಮಣಕಾರಿ ಆಟವಾಡಿದ ವೆಂಕಟೇಶ್ 16 ಎಸೆತಗಳಲ್ಲಿ 32 ರನ್ ಗಳಿಸಿದರು.

 ಇದೇ ವೇಳೆ ಕೊಹ್ಲಿ ತಮ್ಮ IPL ವೃತ್ತಿಜೀವನದ ವೇಗದ ಅರ್ಧಶತಕ ದಾಖಲಿಸಿ ತಂಡವನ್ನು ಮುನ್ನಡೆಸಿದರು. ಆದರೆ, ರಶೀದ್ ಖಾನ್ ಒಂದೇ ಓವರ್ನಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಕಬಳಿಸುವ ಮೂಲಕ GTಗೆ ಪಂದ್ಯ ಗೆಲ್ಲುವ ಆಸೆ ಜೀವಂತವಾಗಿಸಿದರು. ಇದರಿಂದ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿತ್ತು.