IPL2026:ನಾಯಕ ರಿಷಬ್ ಪಂತ್ ಆಟಕ್ಕೆ ಲಕ್ನೋ ತಂಡಕ್ಕೆ ಒಲಿದ ಗೆಲುವು

Apr 5, 2026 - 20:41
Apr 5, 2026 - 20:44
 0  139
IPL2026:ನಾಯಕ ರಿಷಬ್ ಪಂತ್ ಆಟಕ್ಕೆ ಲಕ್ನೋ ತಂಡಕ್ಕೆ ಒಲಿದ ಗೆಲುವು

ಹೈದರಾಬಾದ್​; ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಕೊನೆಯ ಓವರ್​ನಲ್ಲಿ ಮಣಿಸಿದ ಲಕ್ನೋ ಸೂಪರ್​ಜೈಂಟ್ಸ್ ತಂಡ (SRH vs LSG) ಲೀಗ್​ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು.

ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ದ ಲಕ್ನೋ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್‌ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿತು. ಇತ್ತ ಈ ಲೀಗ್​ನಲ್ಲಿ ಮೂರನೇ ಪಂದ್ಯವನ್ನಾಡಿದ ಸನ್‌ರೈಸರ್ಸ್ ತಂಡ ಎರಡನೇ ಸೋಲನ್ನು ಎದುರಿಸಬೇಕಾಯಿತು.

 ಅದರಲ್ಲೂ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡಿದ ಸನ್‌ರೈಸರ್ಸ್ ತನ್ನ ಕಳಪೆ ಬ್ಯಾಟಿಂಗ್​ಗೆ ಸೋಲಿನ ಬೆಲೆ ತೆರಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0