IPL2026;ಉದ್ಘಾಟನಾ ಪಂದ್ಯದಲ್ಲಿ ಆರ್.ಸಿ.ಬಿ ಗೆ ಭರ್ಜರಿ ಗೆಲುವು

Mar 28, 2026 - 23:15
Mar 28, 2026 - 23:22
 0  469
IPL2026;ಉದ್ಘಾಟನಾ ಪಂದ್ಯದಲ್ಲಿ  ಆರ್.ಸಿ.ಬಿ ಗೆ ಭರ್ಜರಿ ಗೆಲುವು
ಕೊಹ್ಲಿ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ನ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

SRH ನೀಡಿದ 202 ರನ್ ಗಳ ಬೆನ್ನಟ್ಟಿದ RCB ತಂಡವು 15.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು. ಇಂಪ್ಯಾಕ್ಟ್ ಪ್ಲೇಯರ ಆಗಿ ಬಂದ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ದೇವದತ್ ಪಡಿಕ್ಕಲ್ 26 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ತಮ್ಮ ಶೋ ತೋರಿಸಿದರು. ಅವರ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಮತ್ತು ಮತ್ತು 6 ಸಿಕ್ಸರ್ ಗಳು ಸೇರಿದ್ದವು.

ಮತ್ತೊಂದೆಡೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಔಟ್ ಆಗದೆ 38 ಎಸೆತಗಳಲ್ಲಿ ‌ 5 ಸಿಕ್ಸ್ ಮತ್ತು 5 ಬೌಂಡರಿ ಸಹಿತ 69 ರನ್ ಗಳಿಸಿದರು.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 0
Sad Sad 1
Wow Wow 0