ಶಾಸಕ ಎ.ಎಸ್.ಪೊನ್ನಣ್ಣ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಂಡಲ್ಲಿ ಪಕ್ಷ ಸಂಘಟನೆಗೆ ತೊಡಕು: ಕೆ.ಪಿ.ಸಿ.ಸಿ. ವಕ್ತಾರ ಹೆಚ್.ಎಸ್.ಚಂದ್ರಮೌಳಿ
admincoorgdaily

ಮಡಿಕೇರಿ:ಬಹುನಿರೀಕ್ಷಿತ ಸಚಿವ ಸಂಪುಟ ಪುನರ್ ರಚನೆ ಆಗಿದೆ. ಕೊಡಗಿನ ಇಬ್ಬರು ಯುವ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಮತ್ತು ಆಶಾಭಾವನೆ ಜಿಲ್ಲೆಯ ಜನರಲ್ಲಿತ್ತು. ಕೊಡಗಿನ ಇಬ್ಬರು ಶಾಸಕರು ಯುವಕರಾಗಿದ್ದು, ಸಂಘಟನಾ ಚತುರರಾಗಿದ್ದು, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮುಂದೆ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಪೂರ್ಣ ಸಿಧ್ಧತೆ ಮಾಡಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಸಚಿವ ಸ್ಥಾನ ಕೊಡಗಿಗೆ ಅವಶ್ಯಕತೆ ಅನಿವಾರ್ಯ ಕೂಡ ಆಗಿತ್ತು ಎಂದು ಕೆಪಿಸಿಸಿ ವಕ್ತಾರ ಎಚ್‌ಎಸ್ ಚಂದ್ರಮೌಳಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಜನರ ನಮ್ಮ ನಿರೀಕ್ಷೆ ಸುಳ್ಳಾಗಿದೆ. ಶಬ್ಧಗಳಲ್ಲಿ ವರ್ಣಿಸಲಾಗುತ್ತಿಲ್ಲ. ವೈಯಕ್ತಿಕವಾಗಿ ಪೊನ್ನಣ್ಣನವರಿಗೆ ನನ್ನ ಸಲಹೆ ಏನೆಂದರೆ ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನ ಗೌರವಯುತವಾಗಿ ಇನ್ನೊಬ್ಬರಿಗೆ ಹಸ್ತಾಂತರಿಸಿ, ಉಪಸಭಾಪತಿ ಅಧಿಕಾರ ವಹಿಸಿಕೊಂಡಲ್ಲಿ ಪಕ್ಷ ಸಂಘಟನೆಗೆ ಹೊಡೆತ ಬೀಳಲಿದ್ದು ನೀವುಗಳು ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಅವಕಾಶವಿರುವುದಿಲ್ಲ. ಆ ಸ್ಥಾನಕ್ಕೆ ಅದರದೇ ಆದ ಇತಿಮಿತಿ ಇದ್ದು, ನಿಮ್ಮನ್ನು ಬಿಟ್ಟು ಬೇರೆ ನಾಯಕತ್ವದಲ್ಲಿ ಸಂಘಟನೆ ಕಷ್ಟಸಾಧ್ಯ. ಇಬ್ಬರು ಶಾಸಕರು ಯುವಕರಾಗಿದ್ದು, ನಿಮಗಿಬ್ಬರಿಗೂ ಯೋಗ ಯೋಗ್ಯತೆ ಎರಡೂ ಇದೆ, ಮುಂದಿನ ದಿನಗಳಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಎಚ್.ಎಸ್ ಚಂದ್ರಮೌಳಿ ತಿಳಿಸಿದ್ದಾರೆ.