ಕಾವೇರಿ ನದಿ ಅಳಿದರೆ ಸಂಸ್ಕೃತಿಯೇ ಅಳಿದಂತೆ ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ

Mar 3, 2026 - 12:51
 0  382
ಕಾವೇರಿ ನದಿ  ಅಳಿದರೆ  ಸಂಸ್ಕೃತಿಯೇ ಅಳಿದಂತೆ ಕಣಿವೆ ಆರತಿ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ

ಕುಶಾಲನಗರ: ಕಾವೇರಿ ಕೇವಲ ನದಿಯಲ್ಲ. ಅದೊಂದು ಜನಕೋಟಿ ಹಾಗೂ ಜೀವ ರಾಶಿಯ ಪಾವನ ಗಂಗೆ. ನದಿಯನ್ನು ಸಂರಕ್ಷಿಸದೇ ನಿರ್ಲಕ್ಷ್ಯ ತೋರಿದರೆ ಸಂಸ್ಕ್ರತಿಯೇ ನಾಶವಾದಂತೆ ಎಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು.

 ಸೋಮವಾರ ಕಣಿವೆಯ ಶ್ರೀ ರಾಮಲಿಂಗೇಶ್ವರ ಸನ್ನಿಧಿಯ ಕಾವೇರಿ ನದಿಗೆ ಹೆಬ್ಬಾಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹುಣ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಕಾವೇರಿ ಆರತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನದಿಯನ್ನು ಪ್ರತಿಯೊಬ್ಬರು ಮನೆಯ ದೇವರ ಗುಡಿಯಂತೆ ಕಾಣಬೇಕು. ಹೆತ್ತ ತಾಯಿಯಂತೆ ಪೂಜಿಸಬೇಕು. ಕಲುಷಿತ ತ್ಯಾಜ್ಯಗಳನ್ನು ನದಿಗೆ ಬಿಸಾಕದ ಹಾಗೆ ಎಚ್ಚರಿಕೆ ವಹಿಸಬೇಕೆಂದು ಅವರು ಕೋರಿದರು.

ಸಂಘದ ಕೂಡಿಗೆ ವಲಯದ ಮೇಲ್ವಿಚಾರಕ ಅಚ್ಯುತ, ಹೆಬ್ಬಾಲೆ ಸೇವಾ ಪ್ರತಿನಿಧಿ ಕಲ್ಪನಾ ಪ್ರಕಾಶ್, ಮಂಜುಳಾ ಮಹದೇವ್, ಪವಿತ್ರ, ವಿಶಾಲಾಕ್ಷಿ, ಕಮಲಮ್ಮ, ರೂಪ, ಸುಶ್ಮಿತಾ, ಸವಿತಾ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0