ಅಕ್ರಮ ಪಡಿತರ ಸಂಗ್ರಹಣೆ- ಸಾಗಾಟ; ವಾಹನದೊಂದಿಗೆ ಅಕ್ಕಿ ವಶ
admincoorgdaily

ಕಣಿವೆ : ಬಡತನದ ರೇಖೆಗಿಂತ ಕೆಳಗಿರುವ ಬಡವರಿಗೆ ಸರ್ಕಾರ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಖರೀದಿಸಿ ವಾಹನದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಾಹನದೊಂದಿಗೆ ಕುಶಾಲನಗರ ಗ್ರಾಮಾಂತರ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯರ ಮಾಹಿತಿಯ ಮೇರೆಗೆ ಕುಶಾಲನಗರದ ಆಹಾರ ಇಲಾಖೆ ಅಧಿಕಾರಿ ಸ್ವಾತಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ವಾಹನದಲ್ಲಿ 69 ಕೆಜಿ ಸಂಗ್ರಹಿಸಿ ಇಟ್ಟಿದ್ದುದು ಕಂಡು ಬಂದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಳ್ಳುಸೋಗೆ ನಿವಾಸಿ ವಿನು ಎಂಬವರ ಮೇಲೆ ದೂರು ದಾಖಲಾಗಿದೆ.