ರಸ್ತೆಬದಿ ನಿಷ್ಕ್ರಿಯ ಬೋರ್‌ವೆಲ್, ಶಾಲಾ ಬಾಲಕಿಗೆ ಗಾಯ:ಅಪಾಯಕಾರಿ ಬೋರ್ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ
ಸುಂಟಿಕೊಪ್ಪ: ಇಲ್ಲಿನ ಪನ್ಯ ಬಳಿ ಹಾರ್ ಬೈಲ್ ಗ್ರಾಮಕ್ಕೆ ತೆರಳುವ ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಹಲವು ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಕೊಳವೆ ಬಾವಿಯೊಂದು ನಿಷ್ಕ್ರೀಯಗೊಂಡಿದ್ದು ,ಅದನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.
ಸ್ಥಳೀಯರ ಪ್ರಕಾರ ಕೆಲವು ದಿನಗಳ ಹಿಂದೆ ವಾಹನ ಹಾದು ಹೋದಂತಹ ವೇಳೆ ಹೆದರಿ ಹಿಂದಕ್ಕೆ ಓಡಿಬಂದಾಗ ಈ ಬೋರೆವೆಲ್ ಮೇಲೆ ಬಿದ್ದು ಶಾಲಾ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಈ ಬಗ್ಗೆ ಸಂಬಂಧಿಸಿದವರು ಎಚ್ಚೆತುಕೊಳ್ಳದಿರುವುದು ವಿಷಾದನೀಯವೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಬೋರ್‌ವೆಲ್ ಕಳೆದ ಹಲವು ವರ್ಷಗಳಿಂದ ಯಾವುದೇ ಉಪಯೋಗವಿಲ್ಲದೆ ರಸ್ತೆ ಬದಿಯಲ್ಲೇ ಅಪಾಯಕಾರಿಯಾಗಿ ಬಿದ್ದಿದ್ದು, ಶಾಲಾ ಮಕ್ಕಳು ಪ್ರತಿದಿನ ಶಾಲಾ ವಾಹನಕ್ಕಾಗಿ ಇದೇ ಸ್ಥಳದಲ್ಲಿ ಕಾಯುತ್ತಿರುತ್ತಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದೇ ಆರೋಪ ಕೇಳಿಬಂದಿದೆ. ಇನ್ನೂ ದೊಡ್ಡ ಅನಹುತ ಸಂಭವಿಸುವ ಮುನ್ನ ಈ ನಿಷ್ಕ್ರಿಯ ಬೋರ್‌ವೆಲ್ ಅನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಪ್ರಸಾದ್ ಕುಟ್ಟಪ್ಪ ಮಾತನಾಡಿ, "ಒಬ್ಬ ಶಾಲಾ ಬಾಲಕಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ದುಃಖಕರ. ಇಂತಹ ಅಪಾಯಕಾರಿ ಬೋರ್‌ವೆಲ್ ಅನ್ನು ಕೂಡಲೇ ತೆರವುಗೊಳಿಸಬೇಕು. ಮತ್ತೊಂದು ಅವಘಡ ಸಂಭವಿಸುವವರೆಗೆ ಕಾಯುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
