ಭಾಗಮಂಡಲ ಕೆವಿಜಿ ಐಟಿಐ ನಲ್ಲಿ ನೂತನ ವಿದ್ಯಾರ್ಥಿಗಳ ಪ್ರಾರಂಭೋತ್ಸವ
admincoorgdaily

ಮಡಿಕೇರಿ:ಕೆವಿಜಿ ಐಟಿಐ ಭಾಗಮಂಡಲದಲ್ಲಿ 2026- 28ನೇ ಸಾಲಿಗೆ ಪ್ರವೇಶ ಪಡೆದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಮತ್ತು ನೂತನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಂಸ್ಥೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲರಾದ ಶ್ರೀಕಾಂತ್ ಕೆವಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪ್ರಾಂಶುಪಾಲರು ಸಂಸ್ಥೆ ಬೆಳೆದ ಬಗ್ಗೆ ,ನೂತನ ವಿದ್ಯಾರ್ಥಿಗಳಿಗೆ ಸಂಸ್ಥೆಗೆ ಸಂಬಂಧ ಪಟ್ಟ ನಿಯಮಗಳು, ಪೋಷಕರಿಗೆ ಅವರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ತರಬೇತಿ ಅಧಿಕಾರಿ ಶ್ರೀ ಪುನೀತ್ ಕುಮಾರ್ ಇವರು ಸಂಸ್ಥೆ ಮತ್ತು ತರಬೇತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಕಚೇರಿ ಅಧ್ಯಕ್ಷರಾದ ಶ್ರೀ ವಿನೋದ್ ಸಿ ಕೆ ಮತ್ತು ಶ್ರೀ ಯುವಕರ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು . ಕಿರಿಯ ತರಬೇತಿ ಅಧಿಕಾರಿ ಉದಯಕುಮಾರ್ ಕೆ ಸಿ ಸ್ವಾಗತಿಸಿದರು. ವಿದ್ಯಾರ್ಥಿ ಶರತ್ ಪ್ರಾರ್ಥಿಸಿದರು.