ಆ. 5 ರಂದು ಕೊಡಗು ಡೆಕೊರೇಷನ್, ಶಾಮಿಯಾನ, ಲೈಟಿಂಗ್ಸ್ ಮಾಲೀಕರ ಸಂಘದ ಉದ್ಘಾಟನೆ

Aug 3, 2026 - 14:56
Aug 3, 2026 - 15:06
 0  51
ಆ. 5 ರಂದು ಕೊಡಗು ಡೆಕೊರೇಷನ್, ಶಾಮಿಯಾನ, ಲೈಟಿಂಗ್ಸ್ ಮಾಲೀಕರ ಸಂಘದ ಉದ್ಘಾಟನೆ

ಮಡಿಕೇರಿ ಆ 03:ಕೊಡಗು ಜಿಲ್ಲಾ ಡೆಕೊರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘ ಆಗಸ್ಟ್ 5 ರಂದು ಉದ್ಗಾಟನೆಯಾಗಲಿದೆ. ನಗರದ ಹೊರವಲಯದಲ್ಲಿನ ಅಪ್ಪಂಗಳದ ಸ್ವಾಗತ್ ಸಭಾಂಗಣದಲ್ಲಿ ಆ. 5 ರಂದು ಬುಧವಾರ ಬೆಳಗ್ಗೆ 10.30 ಗಂಟೆಗೆ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಅಜ್ಜೇಟಿರ ಲೋಕೇಶ್, ಪ್ರಧಾನ ಕಾಯ೯ದಶಿ೯ಯಾಗಿ ಅವಿನ್ ಕುಮಾರ್ ಮತ್ತು ಆಡಳಿತ ಮಂಡಳಿ ನಿದೇ೯ಶಕರು ಅಧಿಕಾರ ಸ್ವೀಕರಿಸಲಿದ್ದಾರೆ.

ಸಂಘದ ಉದ್ಗಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ನೆರವೇರಿಸಲಿದ್ದು, ಸಂಘದ ಲೋಗೋವನ್ನು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅನಾವರಣ ಮಾಡಲಿದ್ದಾರೆ.

ಸಂಘದ ಉದ್ಘಾಟನಾ ಕಾಯ೯ಕ್ರಮದಲ್ಲಿ ಗೌರವಾನ್ತಿನ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾಕುಶಾಲಪ್ಪ, ಜಿಲ್ಲಾದಿಕಾರಿ ಎಸ್.ಡಿ. ಸೋಮಶೇಖರ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮಣಿ, ಕನಾ೯ಟಕ ರಾಜ್ಯ ಶಾಮಿಯಾನ, ಧ್ವನಿ ಮತ್ತು ಕ್ಷೇಮಾಭಿವೖದ್ದಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಂ ಅತ್ತಾರ್, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮಸ್೯ನ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ಹಿರಿಯ ಪತ್ರಕತ೯ ಅನಿಲ್ ಹೆಚ್.ಟಿ. . ಕೊಡಗು ಜಿಲ್ಲಾ ಡೆಕೊರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘ ಪ್ರಧಾನ ಕಾಯ೯ದಶಿ೯ ಅವಿನ್ ಕುಮಾರ್, ಖಜಾಂಚಿ ಹೆಚ್.ಪಿ. ಲೋಕೇಶ್ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0