ಸೆ.2 ರಂದು ಪೊನ್ನಂಪೇಟೆ ತಾಲೂಕು ರೆಡ್ ಕ್ರಾಸ್ ಘಟಕ ಉದ್ಘಾಟನೆ

ಸೆ.2 ರಂದು ಪೊನ್ನಂಪೇಟೆ ತಾಲೂಕು ರೆಡ್ ಕ್ರಾಸ್ ಘಟಕ ಉದ್ಘಾಟನೆ

ಮಡಿಕೇರಿ: ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದಿಂದ ಸೆಪ್ಟೆಂಬರ್ 2 ರಂದು ಪೊನ್ನಂಪೇಟೆ ತಾಲೂಕು ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಸೆ.2 ರಂದು ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಪೊನ್ನಂಪೇಟೆ ತಾಲೂಕು ಪಂಚಾಯತ್ ಭವನದಲ್ಲಿ ಆಯೋಜಿತ ಪೊನ್ನಂಪೇಟೆ ತಾಲೂಕು ರೆಡ್ ಕ್ರಾಸ್ ನ ನೂತನ ಘಟಕವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಕೊಡಗು ಘಟಕದ ಸಭಾಪತಿ ಬಿ.ಕೆ. ರವೀಂದ್ರ ರೈ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ, ಕನಾ೯ಟಕ ರೆಡ್ ಕ್ರಾಸ್ ನ ಉಪಾಧ್ಯಕ್ಷ, ನಿವೖತ್ತ ಪೊಲೀಸ್ ಎಡಿಜಿಪಿ ಬಿ. ಭಾಸ್ಕರ್ ರಾವ್ ಕೊಡಗು ಜಿಲ್ಲಾಧಿಕಾರಿ, ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ವೆಂಕಟರಾಜಾ,ಪೊನ್ನಂಪೇಟೆ ತಹಶೀಲ್ದಾರ್ ಕೆ.ಎನ್. ಮೋಹನ್ ಕುಮಾರ್, ರಾಜ್ಯ ರೆಡ್ ಕ್ರಾಸ್ ನ ಸಹಾಯಕ ಕಾಯ೯ದಶಿ೯ ಉಮಾಕಾಂತ್, ಕೊಡಗು ರೆಡ್ ಕ್ರಾಸ್ ಕಾಯ೯ದಶಿ೯ ಎಂ.ಧನಂಜಯ್ ಪಾಲ್ಗೊಳ್ಳಲಿದ್ದಾರೆ.