ಕೆ.ಬಾಡಗ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ
ಪೊನ್ನಂಪೇಟೆ:ತಾಲ್ಲೂಕಿನ ಮಹಾತ್ಮಗಾಂಧಿ ಕೆ.ಬಾಡಗ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಉದ್ಘಾಟಿಸಿದರು.
ನೂತನ ಆಡಳಿತ ಕಟ್ಟಡವನ್ನು ವಿದ್ಯುತ್ವಾಗಿ ಉದ್ಘಾಟಿಸಿದ ಮಾನ್ಯ ಶಾಸಕರು ಈ ಭಾಗದ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಮುಖ್ಯ ವಾಹಿನಿಯದ ಗ್ರಾಮ ಪಂಚಾಯಿತಿ ಉತ್ತಮ ಕೆಲಸ ಮಾಡಿ ಜನಮನ್ನಣೆ ಗಳಿಸುವಂತಾಲಿ ಎಂದು ಹಾರೈಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಕೆ ಬಾಡಗ ವಲಯ ಅಧ್ಯಕ್ಷರಾದ ಚಿಮ್ಮಣ್ಣಮಾಡ ರವಿ, ಕಳಿಚಂಡ ವಿಷ್ಣು ಕಾರ್ಯಪ್ಪ, ಕುಟ್ಟ ಪಂಚಾಯಿತಿ ಮಾಜಿ ಸದಸ್ಯರು ಮುಕಟೀರ ನವೀನ್ ಅಯ್ಯಪ್ಪ, ಮಧು ಸೋಮಯ್ಯ, ಕೆ ಕೆ ನಟರಾಜ್, ಅಪ್ಪಣ್ಣ, ಕೆ ಬಾಡಗ ಪಂಚಾಯಿತಿಯ ಆಡಳಿತ ಅಧಿಕಾರಿ ಶ್ರೀ ರಾಜೇಶ್ ಕೆಆರ್, ಕೆ ಬಾಡಗ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರಾದ ಕೆಎಂ ಬಿದ್ದಪ್ಪ, ಮಾಜಿ ಸದಸ್ಯರು ಬೋಪಣ್ಣ, ಮೋಹನ್ ದಾಸ್, ಮಾಜಿ ಅಧ್ಯಕ್ಷರು ಉಷಾ, ಚಂಗಪ್ಪ, ಪೂವಯ್ಯ, ಕಾವೇರಮ್ಮ, ರಾಮಕೃಷ್ಣ, ರಮೇಶ್, ಕಾಳ, ಮಣಿ, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
